ಮೈಸೂರು : ಲಾಕ್ಡೌನ್ ಹಿನ್ನೆಲೆ ಕಳೆದ 80 ದಿನಗಳಿಂದ ಮುಚ್ಚಿದ್ದ ದೇವಸ್ಥಾನಗಳು ಸೋಮವಾರದಿಂದ ದರ್ಶನ ನೀಡಲು ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿವೆ.
ಜೂನ್ 8ರಿಂದ ದೇವಾಲಯಗಳನ್ನ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ ನಂಜನಗೂಡು, ಚಾಮುಂಡೇಶ್ವರಿ, ತಲಕಾಡು ದೇವಾಲಯ, ಕೆಆರ್‌ನಗರ ತಾಲೂಕಿನ ಶ್ರೀರಾಮ ದೇವಾಲಯ ಸೇರಿ ಮುಜರಾಯಿ ಇಲಾಖೆಗೆ ಸೇರಿದ ಹಾಗೂ ಸರ್ಕಾರೇತರ ದೇವಾಲಯಗಳು ಆವರಣದ ಸ್ವಚ್ಛತೆ ಕಡೆ ಗಮನ ಹರಿಸಿವೆ.
ದೇವಾಲಯ ಆವರಣ, ಗೋಡೆಗಳನ್ನು ಸಿಬ್ಬಂದಿ ಶುಚಿಗೊಳಿಸುತ್ತಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ಬಾಕ್ಸ್ ಹಾಕಲಾಗಿದೆ.
ವಿಶೇಷ ದರ್ಶನ ವ್ಯವಸ್ಥೆ ಇಲ್ಲ, ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ. ಹೂ, ಹಣ್ಣು, ಕಾಯಿ ತರುವಂತಿಲ್ಲ. ತೀರ್ಥ ಪ್ರಸಾದ ನೀಡಲ್ಲ, ಮಕ್ಕಳು, ವಯೋವೃದ್ಧರಿಗೆ ಪ್ರವೇಶವಿಲ್ಲ. ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ. ಸ್ಕ್ರೀನಿಂಗ್, ಸ್ಯಾನಿಟೈಸ್ ಆದ ಬಳಿಕ ದರ್ಶನಕ್ಕೆ ತೆರಳಲು ಅವಕಾಶ ನೀಡಲಾಗುವುದು.