ETV Bharat / state

ತಹಶೀಲ್ದಾರರ ಸಹಿಯನ್ನೇ ನಕಲಿ ಮಾಡಿ ಭಕ್ತರಿಂದ ಹಣ ವಸೂಲಿ!

13 ರಸೀದಿ ಪುಸ್ತಕಗಳ ಜೊತೆಗೆ ಕೆಲವು ನಕಲಿ ಪುಸ್ತಕಗಳನ್ನು ತಾವೇ ಪ್ರಿಂಟ್ ಮಾಡಿಸಿಕೊಂಡು ಭಕ್ತರಿಂದ ಹಣ ವಸೂಲಿಗೆ ಮುಂದಾಗಿದ್ದರು. ಇದನ್ನು ತಿಳಿದ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತಾ ಎನ್.‌ರವೀಂದ್ರ ಸಮಿತಿಯ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾರೆ.

ಪ್ರಸಿದ್ಧ ಮಸಣಿಕಮ್ಮ ದೇವಾಲಯ
author img

By

Published : May 15, 2019, 5:19 AM IST

ಮೈಸೂರು: ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಕಲಿ ರಸೀದಿ ಮೂಲಕ ಭಕ್ತರಿಂದ ಹಣ ವಸೂಲಿ ಮಾಡಿರುವ ಪ್ರಕರಣ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ತಹಶೀಲ್ದಾರ್ ತನಿಖೆ ಕೈಗೊಂಡಿದ್ದಾರೆ.

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಸಿದ್ಧ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿತ್ತು. ಇದಕ್ಕೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡಸಲಾಗಿತ್ತು. ಜೊತೆಗೆ ಭಕ್ತರಿಂದಲೂ ಸಹ ಜೀರ್ಣೋದ್ಧಾರಕ್ಕೆ ಹಣ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಗೆ ತಹಶೀಲ್ದಾರ್ ಅವರ ಸಹಿ ಮತ್ತು ಸೀಲ್ ಇರುವ 13 ರಸೀದಿ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿ ಸಮಿತಿಗೆ ಭಕ್ತರಿಂದ ಹಣ ಪಡೆಯಲು ನೀಡಲಾಗಿತ್ತು.

ಆದರೆ ಈ ಸಮಿತಿ 13 ರಸೀದಿ ಪುಸ್ತಕಗಳ ಜೊತೆಗೆ ಕೆಲವು ನಕಲಿ ಪುಸ್ತಕಗಳನ್ನು ತಾವೇ ಪ್ರಿಂಟ್ ಮಾಡಿಸಿಕೊಂಡು ಭಕ್ತರಿಂದ ಹಣ ವಸೂಲಿಗೆ ಮುಂದಾಗಿದ್ದರು. ಇದನ್ನು ತಿಳಿದ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತಾ ಎನ್.‌ರವೀಂದ್ರ ಸಮಿತಿಯ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾರೆ.

ತಹಶೀಲ್ದಾರ್ ನೇತೃತ್ವದಲ್ಲಿ ಸಭೆ:

ನಕಲಿ‌ ರಸೀದಿ ಮೂಲಕ ಹಣ ಸಂಗ್ರಹ ಮಾಡುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ತಪ್ಪೊಪ್ಪಿಕೊಂಡಿದ್ದು, ಸಮಿತಿ ಸದಸ್ಯರು ತಹಶೀಲ್ದಾರರ ಸಹಿಯನ್ನೇ ನಕಲಿ ಮಾಡಿ ಹಣ ಪಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತಹಶಿಲ್ದಾರ್ ತಮ್ಮ ಕಚೇರಿಯಲ್ಲಿ ಸಮಿತಿಯ ಸದಸ್ಯರ ಸಭೆ ಕರೆದಿದ್ದರು.

Tahsildar
ತಹಶೀಲ್ದಾರ್ ನೇತೃತ್ವದಲ್ಲಿ ಸಭೆ

ಎಷ್ಟು ನಕಲಿ ಪುಸ್ತಕಗಳನ್ನು ಮುದ್ರಿಸಲಾಗಿದೆ. ಅದರಲ್ಲಿ ಎಷ್ಟು ಹಣ ವಸೂಲಿ ಮಾಡಲಾಗಿದೆ. ಎಂಬ ಬಗ್ಗೆ ಖಚಿತವಾಗಿ ಲೆಕ್ಕ ನೀಡಬೇಕೆಂದು ತಿಳಿಸಿದ್ದು, ಇಲ್ಲದಿದ್ದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Intro:ಮೈಸೂರು:ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಕಲಿ ರಸೀದಿ ಮೂಲಕ ಭಕ್ತರಿಂದ ಹಣ ವಸೂಲಿ ಪ್ರಕರಣ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು ಈ ಬಗ್ಗೆ ತಹಶಿಲ್ದಾರ್ ತನಿಖೆ ಕೈಗೊಂಡಿದ್ದಾರೆ.Body:ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪ್ರಸಿದ್ಧ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿತ್ತು ಇದಕ್ಕೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾಮಗಾರಿಯನ್ನು ಆರಂಭಿಸಲು ಸಿದ್ದತೆ ನಡಸಲಾಗಿತ್ತು ಜೊತೆಗೆ ಭಕ್ತರಿಂದಲೂ ಸಹ ಜೀರ್ಣೋದ್ಧಾರಕ್ಕೆ ಹಣ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು ಈ ಸಮಿತಿಗೆ ತಹಶಿಲ್ದಾರ್ ಅವರ ಸಹಿ ಮತ್ತು ಸೀಲ್ ಇರುವ ೧೩ ರಸೀದಿ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿ ಜೀರ್ಣೋದ್ಧಾರ ಸಮಿತಿಗೆ ಭಕ್ತರಿಂದ ಹಣ ಪಡೆಯಲು ನೀಡಲಾಗಿತ್ತು ಆದರೆ ಈ ಸಮಿತಿ ೧೩ ರಸೀದಿ ಪುಸ್ತಕಗಳ ಜೊತೆಗೆ ಕೆಲವು ನಕಲಿ ಪುಸ್ತಕಗಳನ್ನು ತಾವೇ ಪ್ರಿಂಟ್ ಮಾಡಿಸಿಕೊಂಡು ಭಕ್ತರಿಂದ ಹಣ ವಸೂಲಿಗೆ ಮುಂದಾಗಿದ್ದರು ಇದನ್ನು ತಿಳಿದ ಪಿರಿಯಾಪಟ್ಟಣ ತಹಶಿಲ್ದಾರ್ ಶ್ವೇತಾ ಎನ್.‌ರವೀಂದ್ರ ಸಮಿತಿಯ ಸದಸ್ಯರನ್ನು ತಮ್ಮ‌ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾರೆ.

ಇಂದು ತಹಶಿಲ್ದಾರ್ ನೇತೃತ್ವದಲ್ಲಿ ಸಭೆ
ನಕಲಿ‌ ರಸೀದಿ ಮೂಲಕ ಹಣ ಸಂಗ್ರಹ ಮಾಡುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ತಪ್ಪೊಪ್ಪಿಕೊಂಡಿದ್ದು ಸಮಿತಿ ಸದಸ್ಯರು ತಹಶಿಲ್ದಾರರ ಸಹಿಯನ್ನೇ ನಕಲಿ ಮಾಡಿ ಹಣ ಪಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತಹಶಿಲ್ದಾರ್ ಇಂದು ತಮ್ಮ ಕಚೇರಿಯಲ್ಲಿ ಸಮಿತಿಯ ಸದಸ್ಯರ ಸಭೆ ಕರೆದಿದ್ದು ಇದರಲ್ಲಿ ಎಷ್ಟು ನಕಲಿ ಪುಸ್ತಕಗಳನ್ನು ಮುದ್ರಿಸಲಾಗಿದ್ದು ಅದರಲ್ಲಿ ಎಷ್ಟು ಹಣ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ಖಚಿತವಾಗಿ ಲೆಕ್ಕ ನೀಡಬೇಕೆಂದು ತಿಳಿಸಿದ್ದು ಇಲ್ಲದಿದ್ದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.