ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದ್ದು, 4 ವರ್ಷದ ಭರತ್ ಮೃತ ಬಾಲಕ. ಭರತ್ ಲಕ್ಷ್ಮೀಪುರದಲ್ಲಿ ಖಾಸಗಿ ಶಾಲೆಯಲ್ಲಿ ಎಲ್.ಕೆ.ಜಿ ವ್ಯಾಸಂಗ ಮಾಡುತ್ತಿದ್ದ.
ನಿನ್ನೆ ಸಂಜೆ ಶಾಲೆ ಮುಗಿಸಿಕೊಂಡು ತಮ್ಮ ಮನೆಯ ಹತ್ತಿರ ಶಾಲಾ ವಾಹನ ಇಳಿಯುತ್ತಿರುವಾಗ ತರಾತುರಿಯಲ್ಲಿ ಶಾಲಾ ವಾಹನ ಮುಂದೆ ಸಾಗಿದೆ. ಪರಿಣಾಮ ಮಗು ಆಯ ತಪ್ಪಿ ಕೆಳಗೆ ಬಿದ್ದಿದ್ದು, ಶಾಲಾ ವಾಹನದ ಹಿಂದಿನ ಚಕ್ರ ಮಗುವಿನ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಸದ್ಯ ಮಗುವಿನ ಪೋಷಕರು, ಚಾಲಕ ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.