ಮೈಸೂರು: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ 35 ವರ್ಷದ ವಿಜಯ ಎಂಬ ಮಹಿಳೆಯ ಕಣ್ಣಿನಿಂದ ಕಲ್ಲಿನ ಚೂರುಗಳು ಹೊರಬರುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಇವರಿಗೆ ತಲೆನೋವು ಬಾಧಿಸಿದ ಸಂದರ್ಭದಲ್ಲಿ ಕಣ್ಣಿನಿಂದ ನೀರು ಹೊರಬಂದು ಕಣ್ಣಿನ ಮುಂಭಾಗ ಕಲ್ಲಿನಂತೆ ಗಟ್ಟಿಯಾಗಿರುವ ವಸ್ತುಗಳು ಉದುರುತಿದ್ದವಂತೆ.
ಗ್ರಾಮದ ಶಾಲೆಯ ಶಿಕ್ಷಕಿ ಜರೀನಾ ತಾಜ್ ಈಕೆಯ ಮನೆಗೆ ಭೇಟಿ ನೀಡಿದಾಗ ಈ ಸಮಸ್ಯೆ ಗೊತ್ತಾಗಿದೆ. ತಕ್ಷಣ ಸಮೀಪದ ಚಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿದಾಗ, ಇದು ಕಣ್ಣಿನ ಸಮಸ್ಯೆ ಎಂದು ಗೊತ್ತಾಗಿದೆ. ಮಹಿಳೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಯ ನೇತ್ರ ತಜ್ಞರ ಬಳಿ ತೆರಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ದರ್ಗಾಕ್ಕೆ ಜನಾರ್ದನ ರೆಡ್ಡಿ ₹6 ಕೋಟಿ ದೇಣಿಗೆ ವದಂತಿ: ಮುಸ್ಲಿಂ ಮುಖಂಡರು ಹೇಳಿದ್ದೇನು?