ETV Bharat / state

ಆರ್‌ ಧ್ರುವನಾರಾಯಣ್ ಮೇಕೆ ಮೇಯಿಸಲು ಲಾಯಕ್ಕು.. ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ - ಧ್ರುವನಾರಾಯಣ್ ವಿರುದ್ಧ ಹರಿಹಾಯ್ದ ಶ್ರೀನಿವಾಸ ಪ್ರಸಾದ್

ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ‌. ಕಾಂಗ್ರೆಸ್ ಪಕ್ಷವನ್ನ ಜನರು ತಿರಸ್ಕಾರ ಮಾಡುತ್ತಿದ್ದಾರೆ.‌ ಕಾಂಗ್ರೆಸ್​​ನ​​ವರು ಸೋತು ಹತಾಶರಾಗಿದ್ದು, ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರು ಹೋಗಿ ಏನು ಮಾಡಲಾಗಲಿಲ್ಲ..

ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ ಎಂದ ಸಂಸದ ಶ್ರೀನಿವಾಸ ಪ್ರಸಾದ್

author img

By

Published : Mar 18, 2022, 3:06 PM IST

Updated : Mar 18, 2022, 4:55 PM IST

ಮೈಸೂರು : ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ.‌ ಜನ ಕಾಂಗ್ರೆಸ್ ಪಕ್ಷವನ್ನ ತಿರಸ್ಕರ ಮಾಡುತ್ತಿದ್ದಾರೆ ಎಂದು ಸಂಸದ ವಿ.‌‌ ಶ್ರೀನಿವಾಸ್ ಪ್ರಸಾದ್ ಟಿ ನರಸೀಪುರದಲ್ಲಿ ಹೇಳಿಕೆ ನೀಡಿದ್ದಾರೆ.

ಟಿ ನರಸೀಪುರದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ‌. ಕಾಂಗ್ರೆಸ್ ಪಕ್ಷವನ್ನ ಜನರು ತಿರಸ್ಕಾರ ಮಾಡುತ್ತಿದ್ದಾರೆ.‌ ಕಾಂಗ್ರೆಸ್​​ನ​​ವರು ಸೋತು ಹತಾಶರಾಗಿದ್ದು, ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರು ಹೋಗಿ ಏನು ಮಾಡಲಾಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಕೊಟ್ಟು ಅನುಷ್ಠಾನಕ್ಕೆ ತರಲು ಬದ್ಧ: ಸಿಎಂ ಬೊಮ್ಮಾಯಿ

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಧ್ರುವನಾರಾಯಣ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ‌ ನಡೆಸಿದ ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ್ ಒಬ್ಬ ಮುಠ್ಠಾಳ.‌ ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಎಲ್ಲರ ಮೇಲೆ ಚಾಡಿ ಹೇಳಿಕೊಂಡು ತಿರುಗಾಡುತ್ತಾನೆ.

ಮಾಜಿ ಸಂಸದ ಆರ್‌ ಧ್ರುವನಾರಾಯಣರ ವಿರುದ್ಧ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿರುವುದು..

ಆರ್‌ ಧ್ರುವನಾರಾಯಣ್ ಮೇಕೆ ಮೇಯಿಸಲು ಲಾಯಕ್ಕು.‌ ಮೇಕೆದಾಟು ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ ಪಲಾವು ಮಾಡಿಕೊಡುವ ಜವಾಬ್ದಾರಿಯನ್ನ ಡಿ.ಕೆ.ಶಿವಕುಮಾರ್ ಅವರು ಧ್ರುವನಾರಾಯಣ್‌ಗೆ ಕೊಟ್ಟಿದ್ದರು ಎಂದು ವ್ಯಂಗ್ಯವಾಡಿದರು.

ನಂಜನಗೂಡಿಗೆ ಶ್ರೀನಿವಾಸ್ ಪ್ರಸಾದ್ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನ ನೋಡಿ ತಿಳಿಯಲಿ.‌ ಬೇಕಿದ್ದರೆ ಅವರೇ ಹೋಗಿ ನೋಡಲಿ. ಜೆಡಿಎಸ್ ಜೊತೆ ಮೈತ್ರಿಗೆ ಹೋಗದಿದ್ದರೆ ಆರ್‌ ಧ್ರುವನಾರಾಯಣ್ ಸ್ಥಿತಿ ಏನಾಗುತ್ತಿತ್ತೋ ಎಂದು ಕಿಡಿಕಾರಿದರು.

Last Updated : Mar 18, 2022, 4:55 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.