ETV Bharat / state

ಸನಾತನ ಎಂದರೆ ಶಾಶ್ವತ ಎಂದರ್ಥ : ಶ್ರೀ ನಿರ್ಮಲಾನಂದ ಸ್ವಾಮೀಜಿ - ಉದಯನಿದಿ ಸ್ಟಾಲಿನ್​ ವಿವಾದಾತ್ಮಕ ಹೇಳಿಕೆ

ಸನಾತನ ಎಂಬುವುದು ಶಾಶ್ವತ ಎಂಬ ವ್ಯಾಖ್ಯಾನ ನೀಡುತ್ತದೆ. ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಅದೇ ಸನಾತನ ಎಂದು ಶ್ರೀನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಶ್ರೀ ನಿರ್ಮಲಾನಂದ ಸ್ವಾಮೀಜಿ
ಶ್ರೀ ನಿರ್ಮಲಾನಂದ ಸ್ವಾಮೀಜಿ
author img

By ETV Bharat Karnataka Team

Published : Sep 7, 2023, 5:12 PM IST

Updated : Sep 7, 2023, 9:23 PM IST

ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿಕೆ

ಮೈಸೂರು: ಸನಾತನ ಪದಕ್ಕೆ ಇಂಗ್ಲಿಷ್​ನಲ್ಲಿ ಪುರಾತನ ಎಂಬ ಅರ್ಥ ಇದೆ. ಇದಕ್ಕೆ ಸನಾತನ ಎನ್ನುವುದು ಶಾಶ್ವತ ಎಂಬ ವ್ಯಾಖ್ಯಾನ ನೀಡುತ್ತದೆ ಎಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮೀಜಿ ವ್ಯಾಖ್ಯಾನ ಮಾಡಿದ್ದಾರೆ.

ಮೈಸೂರಿನ ಆದಿಚುಂಚನಗಿರಿಯ ಶಾಖಾಮಠದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳ 10 ಮತ್ತು 11ನೇ ತಾರೀಖು, ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ನೂತನ ಕಟ್ಟಡಗಳು ಲೋಕಾರ್ಪಣೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ‌.ದೇವೇಗೌಡ ಭಾಗವಹಿಸಲಿದ್ದಾರೆ. ಎರಡನೇ ದಿನ ಸೆಪ್ಟೆಂಬರ್ 11 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ. ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಸನಾತನ ಧರ್ಮದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಹೇಳಿಕೆ ನೀಡಿದರು.

ಸನಾತನ ಎಂದರೆ ಶಾಶ್ವತ ಎಂದರ್ಥ: ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಮಹಾಭಾರತದ "ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ" ಎಂಬ ಸಂದೇಶವನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದದ ಮೇಲೆ ನಿಗಾ ಇರಬೇಕು. ಸನಾತನ ಪದಕ್ಕೆ ಇಂಗ್ಲಿಷ್​ನಲ್ಲಿ ಪುರಾತನ ಎಂಬ ಅರ್ಥ ಇದೆ. ಸನಾತನ ಎಂಬುವುದಕ್ಕೆ ಶಾಶ್ವತ ಎಂಬ ವ್ಯಾಖ್ಯಾನವು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಈ ಪದ ಮತ್ತೊಂದು ರೀತಿ ಪುರಾತನ ಎಂಬ ಅರ್ಥ ಕೊಡುತ್ತದೆ.

ಅಂದರೆ ಧರ್ಮಗಳ ಉದಯವನ್ನು ನೋಡಿದರೆ, ಮುಸ್ಲಿಂ ಧರ್ಮಕ್ಕೆ 1600 ವರ್ಷಗಳ ಇತಿಹಾಸ ಇದೆ, ಕ್ರಿಶ್ಚಿಯನ್ ಧರ್ಮಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ, ಬೌದ್ಧ ಮತ್ತು ಜೈನ ಧರ್ಮಗಳೆರೆಡು 2500 ವರ್ಷಗಳ ಹಿಂದೆ ಶುರುವಾಗಿದ್ದು. ಆನಂತರ ಸಿಖ್ ಮತ್ತು ಯಹೂದಿ ಧರ್ಮಗಳು ಬಂದವು. ಆದರೆ, ಮಹಾಭಾರತದ ಕಾಲದಲ್ಲಿ ಕೃಷ್ಣ ಹಿಂದೂ ಧರ್ಮದ ಬಗ್ಗೆ ಹೇಳಿದ್ದಾನೆ. ಆದ್ದರಿಂದ ಹಿಂದೂ ಧರ್ಮ ಪುರಾತನವಾದುದು ಎಂಬ ಪುರಾವೆಗಳು ಹಿಂದೂ ಧರ್ಮದ ಬಗ್ಗೆ ಉಲ್ಲೇಖವಾಗಿವೆ. ಹಿಂದೂ ಧರ್ಮ ಸನಾತನ ಅಥವಾ ಪುರಾತನ ಎಂಬುದಕ್ಕೆ ಸಾಕ್ಷಿ ಇದೆ. ಪ್ರಪಂಚದಲ್ಲಿ ಎಲ್ಲಾ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ.

ಅದೇ ರೀತಿ ಎಲ್ಲರಿಗೂ ಬದುಕಲು ಆಮ್ಲಜನಕ ಬೇಕೇಬೇಕು. ಆಮ್ಲಜನಕ ಇಲ್ಲದೇ ಹೋದರೆ ಮನುಷ್ಯ ಏನಾಗುತ್ತಾನೆ ಊಹಿಸಿ ಎಂದು ಹೇಳುವ ಮೂಲಕ ಸನಾತನ ಧರ್ಮ ಎಲ್ಲಾ ಧರ್ಮಗಳಿಗೂ ಪುರಾತನವಾದುದು ಎಂದು ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲನಾಂದ ಸ್ವಾಮೀಜಿಗಳು ಪರೋಕ್ಷವಾಗಿ ಸನಾತನ ಧರ್ಮ ಶಾಶ್ವತ ಎಂದು ಹೇಳಿಕೆ ನೀಡಿದರು.

ಇದರ ಜೊತೆಗೆ ಹಿಂದೂ ಧರ್ಮದ ಪರವಾಗಿ ಸ್ವಾಮೀಜಿಗಳು ಒಟ್ಟಾಗಿ ಹೋರಾಟ ಮಾಡುವ ಬಗ್ಗೆ, ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಯತೆ ಬರಬಹುದು. ಆಗ ನಾವೆಲ್ಲ ಒಟ್ಟಾಗಿ ಕುಳಿತು ಚರ್ಚೆ ನಡೆಸೋಣ. ತಾವೇ ಈ ಸಭೆಯ ಮುಂದಾಳತ್ವ ವಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶ್ರೀಗಳು ಮೌನವಹಿಸಿದರು‌. ಇದರ ಜೊತೆಗೆ ಧರ್ಮದ ಬಗ್ಗೆ ತಿಳಿದುಕೊಳ್ಳದವನು, ತಮ್ಮ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಇತರ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ. ನಾಡನ್ನಾಳುವ ದೊರೆಗೆ ಪ್ರಜೆಗಳ ಧಾರ್ಮಿಕತೆಯನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಟಾಂಗ್ ನೀಡಿದರು.

ಇಂಡಿಯಾ ಬದಲಾವಣೆ ಬಗ್ಗೆ ಗೊತ್ತಿಲ್ಲ : ಇಂಡಿಯಾವನ್ನ ಭಾರತ ಎಂದು ಕರೆಯುವ ಬಗ್ಗೆ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಕೆಲವು ಕಡೆ ಭಾರತ ಸರ್ಕಾರ ಎಂದು ಬರೆಯುತ್ತಾರೆ. ಮತ್ತೆ ಕೆಲವು ಕಡೆ ಇಂಡಿಯನ್ ಗವರ್ನಮೆಂಟ್ ಎಂದು ಬರೆಯುತ್ತಾರೆ. ಈ ವಿಚಾರದಲ್ಲಿ ಸಂಬಂಧಪಟ್ಟವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಎಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮೂಲ ಅರಿವು ನನಗಿಲ್ಲ. ಇದರ ಬಗ್ಗೆ ನನ್ನ ನಿರ್ಧಾರ ಏನು ಇಲ್ಲ ಎಂದು ಇಂಡಿಯಾ ಭಾರತ ಆಗುವ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ತಮ್ಮದು ಯಾವುದೇ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

Last Updated : Sep 7, 2023, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.