ಮೈಸೂರು: ಅರಣ್ಯ ಭವನದ ಆವರಣದಲ್ಲಿ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ವಿಜಯ, ಕಾವೇರಿ ಆನೆಗಳಿಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ವೃತ್ತ ಅರಣ್ಯಾಧಿಕಾರಿ ಹೀರೆಲಾಲ್, ಡಿಸಿಎಫ್ ಗಳಾದ ಅಲೆಗ್ಸಾಂಡರ್, ಡಾ.ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಅರಣ್ಯ ಭವನದಿಂದ ಅರಮನೆ ತಲುಪಿದ ಬಳಿಕ ಗಜಪಡೆಗಳಿಗೆ ವಿಶೇಷ ಆತಿಥ್ಯ ಸಿಗಲಿದೆ.