ಮೈಸೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 2020-2021ರ ಬಜೆಟ್ ಅನ್ನು ಟಿಂಕರಿಂಗ್ ಬಜೆಟ್, ಇದರಿಂದ ಆರ್ಥಿಕತೆ ಸುಧಾರಣೆ ಆಗುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುನ್ನೋಟವಿಲ್ಲದೆ ಬಜೆಟ್ ಮಂಡಿಸಿದ್ದಾರೆ. ರೈತರಿಗೆ ಉದ್ಯೋಗವಿಲ್ಲ. ನಿರಾಶದಾಯಕ ಬಜೆಟ್ ಮೊದಲ ಬಾರಿಗೆ ಎಲ್ ಐಸಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕುಟುಂಬಕ್ಕೆ ಕಷ್ಟ ಬಂದಾಗ ತಾಳಿ ಮಾರಿಕೊಳ್ಳುತ್ತಾರೆ ಅದೇ ರೀತಿ ಕೊನೆಗಳಿಗೆಯಲ್ಲಿ ಎಲ್ ಐಸಿ ಷೇರು ಮಾರಾಟ ಮಾಡುತ್ತಿದ್ದಾರೆ. ದೇಶ ಆರ್ಥಿಕ ದು:ಸ್ಥಿತಿಯಲ್ಲಿದೆ. ಬಜೆಟ್ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ಅಧೋಗತಿಗೆ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಲೇ ಭಾರತ ಸಾಲದ ದೇಶವಾಗಿದೆ. ದೇಶವನ್ನು ದಿವಾಳಿ ಮಾಡ್ತಾರೆ. ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ವಿಫಲವಾಗಿದ್ದಾರೆ. ಇದು ಮೋದಿ ಬಜೆಟ್, ದೇಶದ ಬಜೆಟ್ ಅಲ್ಲ. ದೇಶದ ಆದಾಯ 510 ಟ್ರಿಲಿಯನ್ ಮಾಡುವುದು ಅಸಾಧ್ಯ. ಮುಂದೆ ಬಜೆಟ್ ಪುನಶ್ಚೇತನ ಮಾಡ್ತೀನಿ ಅಂತಾರೆ. ಆದರೆ ಅದು ಆಗುವುದಿಲ್ಲ. ರೈತರು, ಯುವಕರು, ಉದ್ಯೋಗಿಗಳಿಗೆ ಆಶಾದಾಯಕ ಬಜೆಟ್ ಅಲ್ಲ. ಎಲ್ಲ ವಲಯಗಳಲ್ಲಿ ಹಿಂಜರಿತ ಶುರುವಾಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ. ನರೇಂದ್ರ ಮೋದಿ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಕೊಡ್ತಿವಿ ಅಂದ್ರಿದ್ರು, ಆದರೆ ಮೈನಸ್ ಆಗುತ್ತಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೃಷಿ ಉಡಾನ್ ಯಾರಿಗೆ ಅನುಕೂಲವಾಗಿದೆ. ಕಾರ್ಪೊರೇಟ್ ಬಾಡಿಗಳಿಗೆ ಅನುಕೂಲವಾಗಲಿದೆ. ನರೇಂದ್ರ ಮೋದಿ ರೈತರನ್ನು ದುಪ್ಪಟ್ಟು ಮಾಡ್ತೀವಿ ಅಂದ್ರು, ರೈತರ ದುಪ್ಪಟ್ಟ ಮೂಗಿಗೆ ತುಪ್ಪ ಸೋರುತ್ತಿದ್ದಾರೆ. ಶೆ.10 ರಷ್ಟು ಬೆಳೆಸಲು ಯಾವುದೇ ಕಾರ್ಯಕ್ರಮಗಳು ಪೂರಕವಾಗಿಲ್ಲ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ 10 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಬ್ ಅರ್ಬನ್ ರೈಲಿನ ಕುರಿತು ಕಳೆದ ವರ್ಷ ಹೇಳಿದ್ರು ಆದರೆ, ಒಂದು ಕೆಲಸ ಕೂಡ ಆಗಿಲ್ಲ. ಮತ್ತೆ ಅದನ್ನೇ ಹೇಳಿದ್ದಾರೆ. ಬೆಂಗಳೂರಿನವರು ಖುಷಿ ಪಡಿ ಅಂತ ಇದು ನಗಿಪಾಟಲಿನ ವಿಷಯ ಎಂದು ವ್ಯಂಗ್ಯವಾಡಿದರು. ಉದ್ಯೋಗ ಪುನಶ್ಚೇತನಕ್ಕೆ ಏನು ಕಾರ್ಯಕ್ರಮ ಹೂಡಿಕೆ ಆಗಬೇಕು. ಎಲ್ಲ ಸೆಕ್ಟರ್ಗಳಲ್ಲಿ ಹೂಡಿಕೆ ಆಗದಿದ್ದರೆ ಉದ್ಯೋಗ ಸೃಷ್ಟಿಯಾಗಲ್ಲ. ರಫ್ತು ಹಾಗೂ ಆಮದಿಗೆ ಹೆಚ್ಚು ಮಾಡಲು ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಇದು ಆರ್ಥಿಕ ಸುಧಾರಣೆ ಬಜೆಟ್ ಅಲ್ಲ. ತಜ್ಞರ ಬಳಿ ಸಲಹೆ ಪಡೆಯಬೇಕು. ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆ ಕೇಳಲು ಇವರು ರೆಡಿಯಿಲ್ಲ. ರಕ್ಷಣಾ ಇಲಾಖೆಗೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕಿತ್ತು. ಆದರೆ ನೀಡಿಲ್ಲ ಎಂದು ಸಿದ್ದರಾಮಯ್ಯ ಕೇಂದ್ರ ಬೆಜೆಟ್ ಅನ್ನು ಜರಿದಿದ್ದಾರೆ.
ಪ್ರಧಾನಿ ವಿದೇಶ ಸುತ್ತಿದ್ದಾರೆ. ಆದರೆ ಬಂಡವಾಳ ಹೂಡಿಕೆ ವಾತಾವರಣ ಇಲ್ಲ. ಪ್ರವಾಸೋದ್ಯಮ ಕಾಶ್ಮೀರದಲ್ಲಿ ಬಿದ್ದು ಹೋಗಿದೆ. ಇವರಿಗೆ ಗೊತ್ತಿಲ್ಲ ಬೇರೆಯವರಿಂದ ಕೇಳಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.