ಮೈಸೂರು: ಇಂದು ತಮ್ಮ ನಿವಾಸದ ಎದುರು ಕಾಯ್ದು ನಿಂತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಕಾರಿನಲ್ಲಿ ಕುಳಿತು ಜನರ ಅಹವಾಲುಗಳನ್ನು ಆಲಿಸಿ ಹೊರಟು ಹೋಗಿರುವ ಘಟನೆ ನಡೆದಿದೆ.
ಹೌದು, ನಿನ್ನೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ನೇರವಾಗಿ ಖಾಸಗಿ ಹೋಟೆಲ್ಗೆ ತೆರಳಿ, ವರುಣ ಕ್ಷೇತ್ರದ ಜನರ ಸಮಸ್ಯೆ ಹಾಗೂ ಕ್ಷೇತ್ರದ ಸ್ಥಳೀಯ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಅವರ ಮಗ ಹಾಗೂ ಶಾಸಕ ಯತೀಂದ್ರ ಜೊತೆಯಾಗಿದ್ದು, ನಿನ್ನೆ ದಿನವಿಡೀ ಸಭೆ ನಡೆಸಿದ್ದಾರೆ. ಇಂದು ಸಹ ಸಭೆ ಮುಂದುವರೆಸಿದ್ದು, ಸಭೆಗೆ ಮಾಧ್ಯಮದವರನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.