ಮೈಸೂರು: 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ 257 ಮತಗಳಿಂದ ಜಯಗಳಿಸಲು ನನ್ನ ಶ್ರಮ ಇದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಸಿ.ಎನ್.ಮಂಜೇಗೌಡ (C.N.Manjegowda) ಅಸಮಾಧಾನ ಹೊರಹಾಕಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಸಿದ್ದರಾಮಯ್ಯ ಆಪ್ತ ಸಿ.ಎನ್. ಮಂಜೇಗೌಡ ಅವರು ಮಾತನಾಡಿ, ಅವರು ಸಿದ್ದರಾಮಯ್ಯ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದೇನೆ. ಕನಿಷ್ಠ ಕೆಪಿಸಿಸಿ ಅಥವಾ ಡಿಸಿಸಿ ಸದಸ್ಯ ಸ್ಥಾನ ಕೊಡಿಸಲಿಲ್ಲ. ನನಗೆ ಗೌರವ ಇಲ್ಲದ ಕಡೆ ಇರಬಾರದೆಂದು ಇಂದು ಜೆಡಿಎಸ್ ಸೇರಿದ್ದೇನೆ ಎಂದರು.
ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಕೋಲಾರ, ಮೈಸೂರು, ತುಮಕೂರು, ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಈ ಚುನಾವಣೆಯಲ್ಲಿ ಮೈಸೂರು- ಚಾಮರಾಜನಗರ ಕ್ಷೇತ್ರ ಗೆಲ್ಲಲೇಬೇಕು ಅಂತ ತೀರ್ಮಾನಿಸಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಂದೇಶ್ ನಾಗರಾಜ್ ಕೊನೆ ಕ್ಷಣದಲ್ಲಿ ಪ್ರಯತ್ನ ಮಾಡಿದ್ದಾರೆ. ಆದರೆ ನಡೆದುಕೊಂಡ ರೀತಿಯ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ಆದ್ದರಿಂದ ನನ್ನ ಆಯ್ಕೆ ಅನ್ನುವ ಪ್ರಶ್ನೆಯೇ ಇಲ್ಲ ಎಂದ್ರು.
ಮಂಜೇಗೌಡ ಪಕ್ಷ ಸೇರಿದ್ದಾರೆ,ಯಾರು ಅಭ್ಯರ್ಥಿ ಆಗಬೇಕು ಅಂತ ತೀರ್ಮಾನಿಸಿಲ್ಲ ಎಂದರು.ಶಾಸಕರಾದ ಸಾ.ರಾ.ಮಹೇಶ್, ಮಹದೇವು, ಅಶ್ವಿನ್ ಕುಮಾರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಯಾರನ್ನೇ ಅಭ್ಯರ್ಥಿ ಮಾಡಿದರೂ ಸಹಕಾರ ನೀಡುವುದಾಗಿ ಮುಖಂಡರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಸಿದ್ದರಾಮಯ್ಯ ಆಪ್ತ ಸಿ.ಎನ್.ಮಂಜೇಗೌಡ ಅವರನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡರು.ಖಾಸಗಿ ಹೊಟೇಲ್‌ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಶಾಸಕ ಸಾ.ರಾ.ಮಹೇಶ್, ಕೆ.ಮಹದೇವು, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.