ETV Bharat / state

ವಿಪಕ್ಷ ನಾಯಕ ಸಿದ್ದರಾಮಯ್ಯ ಸಹೋದರ ರಾಮಮಂದಿರಕ್ಕೆ ನೀಡಿದ ದೇಣಿಗೆ 10 ರೂಪಾಯಿ..! - ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ

ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ 10 ರೂಪಾಯಿ ದೇಣಿಗೆ ನೀಡಿದ್ದಾರೆ.

Siddaramaiah Brother Donate 10 Rs for Ram Mandir Construction
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಿದ್ದರಾಮಯ್ಯ ಸಹೋದರ
author img

By

Published : Feb 16, 2021, 10:15 PM IST

Updated : Feb 16, 2021, 10:21 PM IST

ಮೈಸೂರು: ರಾಮ ಮಂದಿರಕ್ಕೆ ನಿರ್ಮಾಣಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

Mysore
ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹ

ತಿ.ನರಸೀಪುರ ತಾಲೂಕಿನ ಸಿದ್ದರಾಮನ ಹುಂಡಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಲು ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡ ನಿವಾಸಕ್ಕೆ ತೆರಳಿ ದೇಣಿಗೆ ಕೇಳಿದ್ದಾರೆ. ಕನಿಷ್ಠ 10 ರೂ.ನಿಂದ ಎಷ್ಟಾದರೂ ದೇಣಿಗೆ ನೀಡಿ ಎಂದ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಿದ್ಧೇಗೌಡ ಅವರು 10 ರೂ. ದೇಣಿಗೆ ನೀಡಿದ್ದಾರೆ. ಸಿದ್ದೇಗೌಡರು ನೀಡಿದ ದೇಣಿಗೆಗೆ ಬಿಜೆಪಿ ಕಾರ್ಯಕರ್ತರು ರಶೀದಿ ನೀಡಿದ್ದಾರೆ.

ಓದಿ: ರಾಮಮಂದಿರ ನಿರ್ಮಾಣಕ್ಕೆ ಬೆಂಗಳೂರಿಗರಿಂದ ನಿರೀಕ್ಷೆಗೂ ಮೀರಿ ದೇಣಿಗೆ: ಡಿ.ವಿ. ಸದಾನಂದ ಗೌಡ

ಸಿದ್ದರಾಮಯ್ಯರ ಅಣ್ಣನ ಮಗನ ಬಳಿಯೂ ಬಿಜೆಪಿ ಕಾರ್ಯಕರ್ತರು ಹಣ ಕೇಳಿದ್ದಾರೆ. ನಾನು‌ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ. ನಮ್ಮೂರಿನಲ್ಲಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಅವರಿಗೆ ಕರಪತ್ರ ನೀಡಿ ಬಿಜೆಪಿ ಕಾರ್ಯಕರ್ತರು ವಾಪಸ್ ಆಗಿದ್ದಾರೆ.

ಸಿದ್ದರಾಮನ ಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು 40 ಸಾವಿರ ರೂ. ದೇಣಿಗೆ ಸಂಗ್ರಹ ಮಾಡಿದ್ದಾರೆ.

Last Updated : Feb 16, 2021, 10:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.