ETV Bharat / state

ಮೈಸೂರಲ್ಲಿ ಬಾಲಕನ ಮೇಲೆ ಐವರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ.. ವಿಡಿಯೋ ವೈರಲ್- ಆರೋಪಿಗಳು ಅಂದರ್​ - ಅಪ್ರಾಪ್ತ ಬಾಲಕನ ಮೇಲೆ ಅಪ್ರಾಪ್ತ ಬಾಲಕರಿಂದ ಲೈಂಗಿಕ ದೌರ್ಜನ್ಯ

ಬಾಲಕನ ಮೇಲೆ ಅಪ್ರಾಪ್ತರಿಂದ ಅಟ್ಟಹಾಸ-ಲೈಂಗಿಕ ದೌರ್ಜನ್ಯವೆಸಗಿದ ಅಪ್ರಾಪ್ತರು-ಮೈಸೂರಲ್ಲಿ ಆರೋಪಿಗಳ ಬಂಧನ

sexual-harassment-on-minor-boy-by-five-boys-in-mysore
ಬಾಲಕನ ಮೇಲೆ ಐವರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ
author img

By

Published : Jun 30, 2022, 4:05 PM IST

Updated : Jun 30, 2022, 4:20 PM IST

ಮೈಸೂರು: ಬಾಲಕನ ಮೇಲೆ ಐವರು ಅಪ್ರಾಪ್ತ ವಯಸ್ಸಿನ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿದ ವಿಚಿತ್ರ ಪ್ರಕರಣ ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಗ್ರಾಮದ 8ನೇ ತರಗತಿಯ ಬಾಲಕನನ್ನು 8 ಮತ್ತು 10ನೇ ತರಗತಿಯ ಬಾಲಕರು ಕ್ರಿಕೆಟ್ ಆಡಲೆಂದು ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ದೃಶ್ಯವನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದೇಗೆ?: ಜೂನ್ 18ರಂದು ಈ ಘಟನೆ ನಡೆದಿದ್ದು, ನಂತರ ದೌರ್ಜನ್ಯಕ್ಕೊಳಗಾದ ಬಾಲಕ ಶಾಲೆಗೆ ಹೋಗದೆ, ಸರಿಯಾಗಿ ಊಟ ಮಾಡದೆ ಮನೆಯಲ್ಲೇ ಮಂಕಾಗಿ ಇರುತ್ತಿದ್ದ. ಈ ಬಗ್ಗೆ ಪೋಷಕರು ಎಷ್ಟೇ ಕೇಳಿದರೂ ಆತ ನಡೆದ ವಿಚಾರವನ್ನು ಹೇಳುತ್ತಿರಲಿಲ್ಲ. ಬಾಲಕನ ಸ್ಥಿತಿ ಬಗ್ಗೆ ಆತನ ಅಣ್ಣ ತನ್ನ ಸ್ನೇಹಿತನ ಬಳಿ ಮಾತನಾಡುವಾಗ ವೈರಲ್ ಅದ ವಿಡಿಯೋ ಬಗ್ಗೆ ಗೊತ್ತಾಗಿದೆ.

ತಕ್ಷಣ ಪೋಷಕರು ಬಿಳಿಗೆರೆ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದರು. ಪೊಲೀಸರು ವೈರಲ್ ಅದ ವಿಡಿಯೋ ಹಾಗೂ ಬಾಲಕನ ಹೇಳಿಕೆ ಆಧರಿಸಿ ಐವರು ಬಾಲಕರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ಐವರೂ ಅಪ್ರಾಪ್ತರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: 15 ದಿನದ ಹಿಂದೆ ಕೇಸ್​, 6 ದಿನದಲ್ಲೇ ವಿಚಾರಣೆ ಪೂರ್ಣ: ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ ಜೀವಾವಧಿ ಶಿಕ್ಷೆ

Last Updated : Jun 30, 2022, 4:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.