ETV Bharat / state

ನಂಜನಗೂಡಿನಲ್ಲಿ ಸ್ವಯಂ ಪ್ರೇರಿತ ಬಂದ್: ಮೈಸೂರಿನಲ್ಲೂ ಪ್ರತಿಭಟನೆ

author img

By ETV Bharat Karnataka Team

Published : Jan 4, 2024, 5:32 PM IST

Updated : Jan 4, 2024, 6:31 PM IST

ನಂಜನಗೂಡಿನಲ್ಲಿ ಸ್ವಯಂ ಪ್ರೇರಿತ ಬಂದ್ ಪೊಲೀಸರಿಂದ ನಗರದಲ್ಲಿ ಬಿಗಿ ಬಂದೋಬಸ್ತ್​.

ನಂಜನಗೂಡಿನಲ್ಲಿ ಸ್ವಯಂ ಪ್ರೇರಿತ ಬಂದ್
ನಂಜನಗೂಡಿನಲ್ಲಿ ಸ್ವಯಂ ಪ್ರೇರಿತ ಬಂದ್

ಮೈಸೂರು: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರೆ ನೀಡಿದ್ದ ಬಂದ್​ಗೆ ತಾಲ್ಲೂಕು ಆಡಳಿತದಿಂದ ಅನುಮತಿ ಇಲ್ಲದಿದ್ದರು ಸ್ವಯಂ ಪ್ರೇರಿತರಾಗಿ ನಂಜನಗೂಡು ಪಟ್ಟಣದಲ್ಲಿ ಬಂದ್ ವಾತಾವರಣ ಉಂಟಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಿದ್ದಾರೆ.

ಇಂದು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಿಗಳನ್ನು ಬಂಧಿಸುವಂತೆ ಶ್ರೀ ಕಂಠೇಶ್ವರ ಭಕ್ತರ ಹೆಸರಿನಲ್ಲಿ ಕರೆ ನೀಡಿದ್ದ ನಂಜನಗೂಡು ಬಂದ್​ಗೆ ತಾಲ್ಲೂಕು ಆಡಳಿತ ಯಾವುದೇ ಅನುಮತಿ ನೀಡಿಲ್ಲ. ಆದರೂ ಸ್ವಯಂ ಪ್ರೇರಿತರಾಗಿ ನಂಜನಗೂಡು ಪಟ್ಟಣದಲ್ಲಿ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪರ-ವಿರೋಧ ದೂರು ದಾಖಲು: ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಕಂಠೇಶ್ವರ ಉತ್ಸವ ಮೂರ್ತಿ ಬರುವಾಗ ಅದರ ಮೇಲೆ ನೀರನ್ನು ಎರಚಲಾಗಿತ್ತು ಎಂಬ ವಿಡಿಯೋ ವೈರಲ್ ಆಗಿತ್ತು. ಅದು ಅಶುದ್ಧ ನೀರು ಎಂದು ನಂಜನಗೂಡು ಶ್ರೀ ಕಂಠೇಶ್ವರ ಭಕ್ತರು ಆರೋಪಿಸಿ ಈ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ದೂರು ದಾಖಲು ಮಾಡಿದ್ದರು. ಇತ್ತ ಆ ರೀತಿಯ ಘಟನೆ ನಡೆದಿಲ್ಲ ಎಂದು ಮತ್ತೊಂದು ಸಂಘಟನೆಯವರು ಪ್ರತಿದೂರು ನೀಡಿದ್ದು, ಇದರ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಂಜನಗೂಡಿನ ಶ್ರೀ ಕಂಠೇಶ್ವರ ಭಕ್ತ ಮಂಡಳಿಯ ಹೆಸರಿನಲ್ಲಿ ಜನವರಿ 4ರಂದು ನಂಜನಗೂಡು ಬಂದ್ ಕರೆಯಲಾಗಿದೆ ಎಂದು ಪ್ರಚಾರವಾಗಿತ್ತು. ಈ ಬಗ್ಗೆ ನಿನ್ನೆ ಅಪರ ಜಿಲ್ಲಾಧಿಕಾರಿ ಲೋಕನಾಥ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ, ಬಂದ್​ಗೆ ಅನುಮತಿ ನಿರಾಕರಿಸಿತ್ತು.

ಜೊತೆಗೆ ಶ್ರೀ ಕಂಠೇಶ್ವರ ಭಕ್ತರ ಮಂಡಳಿ ಅಸ್ತಿತ್ವದಲ್ಲೇ ಇಲ್ಲ ಎಂದು ಸಭೆಗೆ ಆಗಮಿಸಿದ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಹೇಳಿದ್ದು, ಆದರೂ ಜನರು ಸ್ವಯಂ ಪ್ರೇರಿತರಾಗಿ ನಂಜನಗೂಡು ಪಟ್ಟಣ ಬಂದ್​ಗೆ ಬೆಂಬಲ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಡಿಷನಲ್ ಎಸ್ಪಿ ನಂದಿನಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿಯಾದ ಬಂದೋಬಸ್ತ್ ಹಾಕಲಾಗಿದೆ. ನಂಜನಗೂಡು ಪಟ್ಟಣದಲ್ಲಿ ಜನ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.

ಮೈಸೂರಿನಲ್ಲೂ ಪ್ರತಿಭಟನೆ: ಇದೇ ವೇಳೆ ಮೈಸೂರಿನಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಪ್ರತಿಭಟನೆ ನಡೆಸಲಾಯಿತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಉಡುಪಿ ಪೇಜಾವರ ಶ್ರೀ ವಿಜಯಪುರಕ್ಕೆ ಭೇಟಿ: ದಲಿತರ ಮನೆಗಳಿಗೆ ತೆರಳಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

Last Updated : Jan 4, 2024, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.