ಮೈಸೂರು: ನಾನು ಸಿಎಂ ರೇಸ್ನಲ್ಲಿಲ್ಲ. ಹೇಗೋ ಸಹಕಾರ ಸಚಿವನಾಗಿದ್ದೇನೆ. ಇಷ್ಟ ಇಲ್ಲ ಅಂದ್ರೆ ಸಚಿವ ಸ್ಥಾನವನ್ನು ಬಿಟ್ಟುಬಿಡ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದರು.
ಇಂದು ಅರಮನೆಗೆ ಗಜಪಡೆಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ದಸರಾ ಖರ್ಚು- ವೆಚ್ಚಗಳ ಬಗ್ಗೆ ಮಾತನಾಡಿದರು. ನಂತರ ಬಿಜೆಪಿಗೆ ಮೂರನೇ ಸಿಎಂ ಬಗ್ಗೆ ಕಾಂಗ್ರೆಸ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿ. ಅವರೊಳಗೆ ಬೇವುದಿ ಆರಂಭವಾಗಿದೆ. ಶಮನ ಮಾಡಿಕೊಳ್ಳಲು ಬಿಜೆಪಿ ಮೇಲೆ ಬಾಣ ಪ್ರಯೋಗ ಮಾಡುತ್ತಿದ್ದಾರೆ. ಅವರು ಇವರ ಮೇಲೆ, ಇವರು ಅವರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ತಮ್ಮ ಮೇಲಿನ ಆಪಾದನೆ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ನೀವು ಸಿಎಂ ರೇಸ್ನಲ್ಲಿ ಇದ್ದೀರಾ? ಎಂಬ ಪ್ರಶ್ನೆಗೆ, ನಾನು ಸಿಎಂ ರೇಸ್ನಲ್ಲಿ ಇಲ್ಲ. ಕೈಮುಗಿದು ಸ್ಪಷ್ಟನೆ ನೀಡುತ್ತೇನೆ. ಹೇಗೋ ಸಹಕಾರಿ ಸಚಿವನಾಗಿದ್ದೇನೆ. ಅದು ಇಷ್ಟ ಇಲ್ಲ ಅಂದ್ರೆ ಹೇಳಿ ಬಿಟ್ಟುಬಿಡ್ತೇನೆ ಎಂದು ತಮಾಷೆಯಾಡಿದರು. ಜೊತೆಗೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಡಿಕೆ ಬ್ರದರ್ಸ್ ಮುಂದೆ ತೋಳೇರಿಸಿದಂತೆ ನನ್ನ ಹತ್ತಿರ ನಡೆಯಲ್ಲ : ಅಶ್ವತ್ಥನಾರಾಯಣಗೆ ಹೆಚ್ಡಿಕೆ ಎಚ್ಚರಿಕೆ