ETV Bharat / state

ರೋಷನ್ ಬೇಗ್ ಏನು ಹೇಳಬೇಕೊ ಅದನ್ನು ಎಸ್ಐಟಿ ಮುಂದೆಯೇ ಹೇಳಲಿ: ಸಿದ್ದರಾಮಯ್ಯ - Kannada news

ಐಎಂಎ ಹಗರಣದಲ್ಲಿ ಶಾಸಕ ರೋಷನ್ ಬೇಗ್ ಹೇಳಿಕೆಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಲಾಗಿದ್ದು, ಅವರು ಏನು ಹೇಳಬೇಕೊ ಅದನ್ನು ಎಸ್ಐಟಿ ಮುಂದೆಯೇ ಹೇಳಲಿ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Jun 13, 2019, 12:40 PM IST

ಮೈಸೂರು: ಐಎಂಎ ಹಗರಣದಲ್ಲಿ ಶಾಸಕ ರೋಷನ್ ಬೇಗ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಲಾಗಿದೆ. ಅವರು ಏನೇ ಹೇಳೊದಿದ್ರೂ ಅದನ್ನು ಎಸ್ಐಟಿ ಮುಂದೆಯೇ ಹೇಳಲಿ ಎಂದರು.

ತಮ್ಮ ನಿವಾಸದ ಎದುರು ಮಾತನಾಡಿದ ಸಿದ್ದರಾಮಯ್ಯ ಅವರು, ಶಾಸಕ ರೋಷನ್ ಬೇಗ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅದೇನಿದ್ರೂ ಎಸ್ ಐಟಿ ಗೆ ಬಿಟ್ಟ ವಿಷಯ. ಎಸ್ ಐಟಿ ರಚನೆಯಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನಂತರ ಎಐಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿಯವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಕಾಂಗ್ರೆಸ್​​ನಲ್ಲಿ ರಾಹುಲ್​ ಬಿಟ್ಟರೆ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯವಾಗಿ ಯಾರೂ ಇಲ್ಲವೆಂದು ಸ್ಪಷ್ಟಪಡಿಸಿದರು.

Intro:ಮೈಸೂರು: ಐಎಂಎ ಹಗರಣದ ಬಗ್ಗೆ ಶಾಸಕ ರೋಷನ್ ಬೇಗ್ ಏನು ಹೇಳಬೆಕೋ ಅದನ್ನು ಎಸ್ಐಟಿ ಮುಂದೆ ಹೇಳಿಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Body:ಇಂದು ತಮ್ಮ ಶಾರದಾದೇವಿ ನಿವಾಸದ ಎದುರು ಮಾತನಾಡಿದ ಸಿದ್ದರಾಮಯ್ಯ ಐಎಂಎ ಹಗರಣದಲ್ಲಿ ಶಾಸಕ ರೋಷನ್ ಬೇಗ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಲಾಗಿದ್ದು ಅವರು ಏನು ಹೇಳಬೇಕೊ ಅದನ್ನು ಎಸ್ಐಟಿ ಮುಂದೆ ಹೇಳಲಿ ಎಂದು ಹಾರಿಕೆಯ ಉತ್ತರ ನೀಡಿದ ಸಿದ್ದರಾಮಯ್ಯ.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದೆವರೆಯುತ್ತಾರೆ ಅವರೇ ಮುಂದು ವರೆಯುತ್ತಾರೆ, ಅವರನ್ನು ಬಿಟ್ಟರೆ ಪರ್ಯಾಯವಾದ ಯಾರು ಇಲ್ಲ ಎಂದರು.
ಸ್ವತಂತ್ರ ನಂತರ ದೇಶದ ಜಿಡಿಪಿ ದರ ಅತ್ಯಂತ ಕನಿಷ್ಠ ಮಟ್ಟಕ್ಕೆ ಹೋಗಿದೆ ರೂಪಾಯಿ ಮೌಲ್ಯ ತುಂಬಾ ಕಡಿಮೆಯಾಗಿದ್ದು ದೇಶದಲ್ಲಿ ನಿರುದ್ಯೋಗ ಹೆಚ್ಷಾಗಿದೆ ಇದನ್ನು ನಾವು ಹೇಳಲು ಹೋದರೇ ದೇಶ ವಿರೋಧಿಗಳಾಗುತ್ತೇವೆ.
ಬಿಜೆಪಿ ಅವರು ಬರಿ ಭಾಷಣ, ಸುಳ್ಳು ಆಶ್ವಾಸನೆ, ರಾಮಮಂದಿರ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ ಅದನ್ನು ಜನರಿಗೆ ಮಾಧ್ಯಮಗಳ ಮೂಲಕ ನಂಬಿಸುತ್ತಾರೆ ಎಂದು ವಾಗ್ದಾಳಿ ಮಾಡಿದ ಸಿದ್ದರಾಮಯ್ಯ ಅಮಿತ್ ಶಾ ಕೇಂದ್ರದ ಗೃಹ ಸಚಿವರಾದ ಮೇಲೆ ಅವರ ವಿರುದ್ಧದ ಎಲ್ಲಾ ಪ್ರಕರಣವನ್ನು ವಾಪಸ್ ಪಡೆಯುತ್ತಿರುವುದನ್ನು ಖಂಡಿಸಿದ ಸಿದ್ದರಾಮಯ್ಯ ಗುಜರಾತ್ ನಲ್ಲಿ ೨ ವರೆ ವರ್ಷ ಜೈಲ್ ವಾಸ ಅನುಭವಿಸಿದ ಅಮಿತ್ ಶಾ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದರು.
ಇಂತಹ ವಿಚಾರವನ್ನು ನಾವು ಹೇಳಿದರೆ ದೇಶ ವಿರೋಧಿಗಳು ಎಂದು ಬಿಂಬಿಸುತ್ತಾರೆ.
ಇಂತಹ ವಿಚಾರಗಳನ್ನು ಹೇಳಲು ಸ್ವತಂತ್ರ ಇಲ್ಲವೇ ಎಂದು ಮಾಧ್ಯಮಗಳಲ್ಲಿ ಪ್ರಶ್ನೆ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.