ಮೈಸೂರು: ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ದಾಳಿ ಮಾಡಿರುವ ಘಟನೆ ಜರುಗಿದೆ. ಏಳೆಂಟು ಜನ ಮುಸುಕುಧಾರಿಗಳ ಗುಂಪು, ದೊಣ್ಣೆಗಳನ್ನು ಹಿಡಿದು ಕಾರಿನಲ್ಲಿದ್ದ ಚಾಲಕನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಪಾರಾಗಲು ಯತ್ನಿಸಿದರೂ ಬಿಡದ ಗುಂಪು, ಆತನನ್ನೂ ಒಳಗೆ ತಳ್ಳಿ ಅದೇ ಕಾರಿನ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ವಾಹನ ಅಪಘಾತ : ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲಿಯೇ ಸಾವು
ಎದುರಿನಿಂದ ಬರುತ್ತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೆಲವು ಸ್ಥಳೀಯರು ಈ ಕುರಿತು ಪ್ರತಿಕ್ರಿಯಿಸಿ, ಕಾರು ಕೇರಳ ನೋಂದಣಿ ಸಂಖ್ಯೆ ಹೊಂದಿದೆ ಎಂದಿದ್ದಾರೆ. ಘಟನೆ ನಡೆದಿದ್ದು ಯಾಕೆ?, ದಾಳಿ ಮಾಡಿದ ಗುಂಪು ಯಾವುದು?, ಮುಸುಕು ಧರಿಸಿ ದಾಳಿ ನಡೆಸಿದ ಹಿನ್ನೆಲೆ ಏನು? ಎಂಬೆಲ್ಲಾ ಪ್ರಶ್ನೆಗಳು ಸ್ಥಳೀಯರಲ್ಲಿ ಮನೆ ಮಾಡಿವೆ. ಸದ್ಯಕ್ಕೆ ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯಗಳು ಪೊಲೀಸರ ಕೈ ಸೇರಿದೆ.