ETV Bharat / state

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರಿಗೆ 20 ವರ್ಷ ಜೈಲು ಶಿಕ್ಷೆ

ಅತ್ಯಾಚಾರ ನಡೆಸಿದ ಬಳಿಕ, ಅಪ್ರಾಪ್ತೆ ಹಾಗೂ ಆಕೆಯ ಕುಟುಂಬಕ್ಕೆ ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಅತ್ಯಾಚಾರಿಗಳು ಬೆದರಿಕೆಯೊಡ್ಡಿದ್ದರು. ಆದರೆ, ಇದಕ್ಕೆ ಹೆದರದೇ ಪೋಷಕರು, ಉದಯಗಿರಿ ಠಾಣೆಯಲ್ಲಿ ಪೋಕ್ಸೋ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದರು.

rape-accused-get-20-years-imprisonment-in-mysore
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Mar 16, 2021, 11:20 AM IST

Updated : Mar 16, 2021, 11:36 AM IST

ಮೈಸೂರು: ಅಪ್ರಾಪ್ತೆಯನ್ನ ಸಾಮೂಹಿಕ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ, 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಒಂದನೇ ಶೀಘ್ರಗತಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

ಸದ್ದಾಂ ಹುಸೇನ್, ನದೀಂ ಪಾಷಾ ಹಾಗೂ ತನ್ವೀರ್ ಪಾಷಾ ನ್ಯಾಯಾಲಯದ ಶಿಕ್ಷೆಗೆ ಒಳಗಾದ ಅತ್ಯಾಚಾರಿಗಳು. 2016ರ ಜನವರಿ 14ರಂದು ಅಪ್ರಾಪ್ತೆಯನ್ನ ಢಾಬಾಗೆ ಕರೆದೊಯ್ದು ಜ್ಯೂಸ್ ಕುಡಿಸಿ ಗೋಬಿ ತಿನ್ನಿಸಿ ನಂತರ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಅತ್ಯಾಚಾರ ನಡೆಸಿದ ಬಳಿಕ, ಅಪ್ರಾಪ್ತೆ ಹಾಗೂ ಆಕೆಯ ಕುಟುಂಬಕ್ಕೆ ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಅತ್ಯಾಚಾರಿಗಳು ಬೆದರಿಕೆಯೊಡ್ಡಿದ್ದರು. ಆದರೆ, ಇದಕ್ಕೆ ಹೆದರದೇ ಪೋಷಕರು, ಉದಯಗಿರಿ ಠಾಣೆಯಲ್ಲಿ ಪೋಕ್ಸೋ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದರು.

ಓದಿ : ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕುಟುಂಬಸ್ಥರಿಗೆ ಆಕಸ್ಮಿಕ ಮರಣ ಎಂದು ನಂಬಿಸಿದ್ದ ಮಹಿಳೆ ಅರೆಸ್ಟ್​

ಉದಯಗಿರಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಸಂತೋಷ್, ಮೂವರು ಅತ್ಯಾಚಾರ ಆರೋಪಿಗಳನ್ನ ಬಂಧಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಿದ್ದರು. ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ತೀರ್ಪು ನೀಡಿದರೆ, ಸಂತ್ರಸ್ತೆ ಪರ ಸರ್ಕಾರಿ ಅಭಿಯೋಜಕರಾದ ಮಂಜುಳಾ ವಾದ ಮಂಡಿಸಿದ್ದರು.

Last Updated : Mar 16, 2021, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.