ಮೈಸೂರು: ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂನಲ್ಲಿ ಎಲ್ಲರೂ ಭಾಗವಹಿಸಿ, ಸಹಕಾರ ನೀಡಿ ಎಂದು ಶಾಸಕ ರಾಮದಾಸ್ ವಿಡಿಯೋ ಮಾಡಿ ಜನರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಮನೆಯಲ್ಲಿಯೇ ಇದ್ದು ಕರ್ಫ್ಯೂನಲ್ಲಿ ಭಾಗಿಯಾಗೋಣ. ಈ ಸಮಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ತಂಡಕ್ಕೆ ಸಂಜೆ ಚಪ್ಪಾಳೆ, ಜಾಗಟೆ ಬಾರಿಸುವುದರ ಮೂಲಕ ಅವರಿಗೆ ಧನ್ಯವಾದ ಸಲ್ಲಿಸೋಣ ಎಂದು ವಿಡಿಯೋ ಮೂಲಕ ಶಾಸಕರು ಮನವಿ ಮಾಡಿದ್ದಾರೆ.