ETV Bharat / state

ಬದನವಾಳುವಿನಲ್ಲಿ ರಾಹುಲ್ ಗಾಂಧಿ ಸಹ ಭೋಜನ.. ಎರಡು ಸಮುದಾಯಗಳ ಮನಸ್ಸು ಜೋಡಿಸುವ ಕೆಲಸ

ಎರಡು ಸಮುದಾಯಗಳ ಜೊತೆ ರಾಹುಲ್ ಗಾಂಧಿ ಸಹ ಭೋಜನ ಮಾಡಿದರು. ಈ ಮೂಲಕ ಮನಸ್ಸುಗಳನ್ನು ತಿಳಿಗೊಳಿಸಿದ್ದು, ಇದು ಭಾರತ ಐಕ್ಯತಾ ಕಾರ್ಯಕ್ರಮ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ಸಹ ಭೋಜನ
ರಾಹುಲ್ ಗಾಂಧಿ ಸಹ ಭೋಜನ
author img

By

Published : Oct 3, 2022, 9:29 AM IST

Updated : Oct 3, 2022, 10:48 AM IST

ಮೈಸೂರು: ಮೂರು ದಶಕಗಳ ಹಿಂದೆ ಬದನವಾಳು ಗ್ರಾಮದಲ್ಲಿ ನಡೆದ ಸಮುದಾಯಗಳ ಸಂಘರ್ಷ ಹತ್ಯಾಕಾಂಡಕ್ಕೆ ತಿರುಗಿತ್ತು. ಇಲ್ಲಿಯವರೆಗೂ ಅವರ ನಡುವಿನ ಅಂತರ ಮುಂದುವರೆದಿತ್ತು. ಆದ್ರೆ ರಾಹುಲ್ ಗಾಂಧಿ ಅವರು ಆ ಎರಡೂ ಸಮುದಾಯಗಳೊಂದಿಗೆ ಸಹ ಭೋಜನ ಸವಿದು, ಮುರಿದಿದ್ದ ಮನಸುಗಳನ್ನು ಜೋಡಿಸಿದ್ದಾರೆ. ಇದು ಭಾರತ್ ಜೋಡೋ ಯಾತ್ರೆಯ ಸಾರ್ಥಕತೆ ಎಂದು ಕಾಂಗ್ರೆಸ್ ತಿಳಿಸಿದೆ.

ರಾಹುಲ್ ಗಾಂಧಿ ಅವರ ಮುಖಂಡತ್ವದಲ್ಲಿ ಗಾಂಧಿ ಜಯಂತಿಯ ದಿನ ಬದನವಾಳು ಗ್ರಾಮದಲ್ಲಿ ಸಹ ಭೋಜನದ ಮೂಲಕ ಎರಡು ಸಮುದಾಯಗಳ ಮನಸ್ಸುಗಳನ್ನು 29 ವರ್ಷಗಳ ಬಳಿಕ ತಿಳಿಗೊಳಿಸಲಾಗಿದೆ. ಭಾರತ್ ಜೋಡೋ ಈಗ ಭಾರತದ ಐಕ್ಯತಾ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

  • ಭಾರತವನ್ನು ಜೋಡಿಸುವುದೆಂದರೆ ಇದೆ,
    3 ದಶಕಗಳ ಹಿಂದೆ ಬದನವಾಳು ಗ್ರಾಮದಲ್ಲಿ ನಡೆದ ಸಮುದಾಯಗಳ ಸಂಘರ್ಷ ಹತ್ಯಾಕಾಂಡಕ್ಕೆ ತಿರುಗಿತ್ತು.
    ಇಲ್ಲಿಯವರೆಗೂ ಅವರ ನಡುವಿನ ಅಂತರ ಮುಂದುವರೆದಿತ್ತು.@RahulGandhi ಅವರು ಆ ಎರಡೂ ಸಮುದಾಯಗಳೊಂದಿಗೆ ಊಟ ಸವಿದು ಮುರಿದಿದ್ದ ಮನಸುಗಳನ್ನು ಜೋಡಿಸಿದ್ದಾರೆ.

    ಇದಲ್ಲವೇ #BharatJodoYatra ಸಾರ್ಥಕತೆ. pic.twitter.com/cPzHPZCZnx

    — Karnataka Congress (@INCKarnataka) October 2, 2022 " class="align-text-top noRightClick twitterSection" data=" ">

ಬದನವಾಳುವಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬದನವಾಳು ಗ್ರಾಮದಲ್ಲಿ ಗಾಂಧಿ ಭಾವಚಿತ್ರಕ್ಕೆ ರಾಹುಲ್ ಗಾಂಧಿ ಪುಷ್ಪಾರ್ಚನೆ ಸಲ್ಲಿಸಿ, ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಗ್ರಾಮದಲ್ಲಿ ಶ್ರಮದಾನ ನೆರವೇರಿಸಿ, ಗ್ರಾಮದ ಹಳೆ ಮನೆಗಳಿಗೆ ಬಣ್ಣ ಬಳಿಯುವ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿದರು ಎಂದರು.

ಮನಸ್ಸುಗಳು ತಿಳಿಯಾಗಬೇಕು. ಎರಡು ಸಮುದಾಯಗಳ ಜೊತೆ ರಾಹುಲ್ ಗಾಂಧಿ ಸಹಭೋಜನ ಮಾಡಿದ್ದು ಇತಿಹಾಸ. ಇದೇ ಭಾರತ್ ಜೋಡೋ, ಭಾರತ ಐಕ್ಯತಾ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿವರಿಸಿದರು.

  • ಭಾರತವು ಭಾಷೆ, ಸಂಸ್ಕೃತಿ ಹಾಗೂ ಭೌಗೋಳಿಕ ಭಿನ್ನತೆಯನ್ನಷ್ಟೇ ಹೊಂದಿಲ್ಲ, ಎಲ್ಲಕ್ಕಿಂತ ಹೆಚ್ಚು ಭಿನ್ನತೆಯನ್ನು ಸೃಷ್ಟಿಸಿರುವುದು - ಜಾತಿ.

    1993ರಲ್ಲಿ ಬಹುದೊಡ್ಡ ಜಾತಿ ಸಂಘರ್ಷದಿಂದ ಬದನವಾಳು ಗ್ರಾಮದಲ್ಲಿ ರಸ್ತೆಯನ್ನು ಮುಚ್ಚಲಾಗಿತ್ತು.

    ಈಗ ಮತ್ತೆ ಆ ರಸ್ತೆಯನ್ನು @RahulGandhi ಅವರು ಜೋಡಿಸುತ್ತಿದ್ದಾರೆ.#BharatJodoYatra pic.twitter.com/tpPngyoOrY

ರಸ್ತೆ ಜೋಡಣೆ: 1993ರಲ್ಲಿ ಬಹುದೊಡ್ಡ ಜಾತಿ ಸಂಘರ್ಷದಿಂದ ಬದನವಾಳು ಗ್ರಾಮದಲ್ಲಿ ರಸ್ತೆಯನ್ನು ಮುಚ್ಚಲಾಗಿತ್ತು. ರಾಹುಲ್ ಗಾಂಧಿ ಅವರು ಗ್ರಾಮದಲ್ಲಿ ಶ್ರಮದಾನ ಮಾಡುವ ಮೂಲಕ ಮತ್ತೆ ಆ ರಸ್ತೆಯನ್ನು ಜೋಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

1993 ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡದಿಂದ 2 ಸಮುದಾಯಗಳ ನಡುವೆ ವೈಷಮ್ಯ ಉಂಟಾಗಿ ಗ್ರಾಮದ ಜನರಲ್ಲಿ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಆದ್ದರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಸಮುದಾಯದವರಿಗೆ ಸಹ ಭೋಜನ ಏರ್ಪಡಿಸಲಾಗಿತ್ತು.

(ಓದಿ: ಸುತ್ತೂರು ಶಾಖಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ.. ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್​ ನಾಯಕ)

Last Updated : Oct 3, 2022, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.