ETV Bharat / state

ಚಾಮುಂಡೇಶ್ವರಿ ದೇವಾಲಯಕ್ಕೆ ರಾಹುಲ್​ ದ್ರಾವಿಡ್, ರಾಮ್​ ಚರಣ್​ ಭೇಟಿ

ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭಾನುವಾರ ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮತ್ತು ನಟ ರಾಮ್​ ಚರಣ್​ ಭೇಟಿ ನೀಡಿದ್ದರು.

mysore Chamundeshwari Temple
mysore Chamundeshwari Temple
author img

By ETV Bharat Karnataka Team

Published : Dec 3, 2023, 10:11 PM IST

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಇನ್ನೊಂದೆಡೆ, ಟಾಲಿವುಡ್​ ನಟ ರಾಮ್ ​ಚರಣ್​ ತೇಜ ಕೂಡ ವಾರಾಂತ್ಯದ ಮುಂಜಾನೆ ಚಾಮುಂಡೇಶ್ವರಿಯ ದರ್ಶನ ಪಡೆದರು.

ಚಾಮುಂಡಿ ಬೆಟ್ಟಕ್ಕೆ ನಟ ರಾಮ್ ಚರಣ್ ತೇಜ ತಮ್ಮ 'ಗೇಮ್ ಚೇಂಜರ್' ಚಿತ್ರತಂಡದೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. ಭಾನುವಾರ ಮುಂಜಾನೆ ಚಾಮುಂಡೇಶ್ವರಿಯ ದರ್ಶನ ಪಡೆದರು. ರಾಮ್ ​ಚರಣ್​ ತೇಜ ತಮ್ಮ ಮುಂದಿನ ಚಿತ್ರ ಗೇಮ್ ಚೇಂಜರ್ ಶೂಟಿಂಗ್‌ಗಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಮ್ಮ ಪುತ್ರನ ಕ್ರಿಕೆಟ್ ಆಟ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿರುವ ರಾಹುಲ್ ದ್ರಾವಿಡ್​ ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಕೋಚ್ ರಾಹುಲ್ ದ್ರಾವಿಡ್​ ತಮ್ಮ ಪತ್ನಿ ವಿಜೇತಾ ಅವರ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದರು.

ಮಗನ ಆಟ ವೀಕ್ಷಣೆಗೆ ಮೈಸೂರಿಗೆ ಬಂದ ದ್ರಾವಿಡ್​: ಮೈಸೂರಿನ ಮಾನಸಗಂಗೋತ್ರಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ನಡುವೆ 19 ವರ್ಷದೊಳಗಿನ ಕೂಚ್ ಬೆಹರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಇದರಲ್ಲಿ ದ್ರಾವಿಡ್​​ ಅವರ ಮಗ ಆಡುತ್ತಿದ್ದಾರೆ. ಅವರ ಆಟವನ್ನು ನೋಡಲು ರಾಹುಲ್ ದ್ರಾವಿಡ್ ದಂಪತಿ ಮೈಸೂರಿಗೆ ಆಗಮಿಸಿದ್ದರು.

ಕೋಚ್​ ಹುದ್ದೆಯಲ್ಲಿ ಮುಂದಿವರೆದ ದ್ರಾವಿಡ್​​: ಕಳೆದ 2021ರ ನವೆಂಬರ್​ ತಿಂಗಳಲ್ಲಿ ಬಿಸಿಸಿಐ ದ್ರಾವಿಡ್​ ಅವರನ್ನು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ 2 ವರ್ಷದ ಅವಧಿಗೆ ಬಿಸಿಸಿಐ ನೇಮಕ ಮಾಡಿತ್ತು. 2023ರ ಏಕದಿನ ವಿಶ್ವಕಪ್​ ವರಗೆ ರಾಹುಲ್​ ದ್ರಾವಿಡ್​ ಅವರು ಭಾರತದ ಪುರುಷರ ತಂಡದ ಕೋಚ್​ ಆಗಿದ್ದರು. ವಿಶ್ವಕಪ್​ನಲ್ಲಿ ಭಾರತ ರನ್ನರ್​ ಅಪ್​ ಆದ ನಂತರ ಅವರು ಹುದ್ದೆಯಿಂದ ಇಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಅವರ ಗುತ್ತಿಗೆಯನ್ನು ಮುಂದುವರೆಸಿದೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮತ್ತೆ ಕೋಚ್​ ಹುದ್ದೆಗೆ: ಏಕದಿನ ವಿಶ್ವಕಪ್​ ಮುಗಿದ ಬೆನ್ನಲ್ಲೇ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಿಂದ ದ್ರಾವಿಡ್​ ದೂರ ಉಳಿದಿದ್ದಾರೆ. ದ್ರಾವಿಡ್​ ಅನಿಪಸ್ಥಿತಿಯಲ್ಲಿ ವಿವಿಎಸ್​ ಲಕ್ಷ್ಮಣ್​​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್​ ಮತ್ತು ಜನವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಅಲ್ಲಿ 3 ಟಿ20, 3 ಏಕದಿನ ಮ ತ್ತು 1 ಟೆಸ್ಟ್​ ಪಂದ್ಯವನ್ನು ಆಡಲಿದೆ. ಈ ಸರಣಿಯಲ್ಲಿ ಪುನಃ ದ್ರಾವಿಡ್​ ಕೋಚ್​ ಹುದ್ದೆಗೆ ಮರಳಲಿದ್ದಾರೆ.

ಇದನ್ನೂ ಓದಿ: ಕೋಚ್​ ಹುದ್ದೆ ವಿಸ್ತರಿತ ಅವಧಿ ಎಷ್ಟು?: ರಾಹುಲ್​ ದ್ರಾವಿಡ್​ ನೀಡಿದ ಮಾಹಿತಿ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.