ETV Bharat / state

ಕೆಆರ್​ಎಸ್​ ಡ್ಯಾಂ ಬಿರುಕು ಹೇಳಿಕೆ: ಸುಮಲತಾ ವಿರುದ್ಧ ಸಚಿವ ಅಶೋಕ್​ ಸಿಡಿಮಿಡಿ - sumalatha dam statement

ಮಂಡ್ಯಕ್ಕೆ ಹೋಗಿ ಜಿಲ್ಲಾಧಿಕಾರಿಗಳನ್ನು‌ ಭೇಟಿ ಮಾಡಿ ಕೆಆರ್​ಎಸ್​ ಹಾಗೂ ಬೇಬಿ ಬೆಟ್ಟ ಸುತ್ತ ಮುತ್ತ ಏನಾಗಿದೆ ಎಂದು ವರದಿ ನೀಡುವಂತೆ ಸೂಚನೆ ನೀಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

r-ashok
ಆರ್​ ಅಶೋಕ್
author img

By

Published : Jul 14, 2021, 5:27 PM IST

Updated : Jul 14, 2021, 6:12 PM IST

ಮೈಸೂರು: ನಮಗೆ ವ್ಯಕ್ತಿ ಯಾರೂ ಮುಖ್ಯವಲ್ಲ, ಕೆಆರ್​ಎಸ್​ ಡ್ಯಾಂ ಮುಖ್ಯ. ಪದೇ ಪದೇ ಬಿರುಕು ಎಂದು ಹೇಳುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್, ಸಂಸದೆ ಸುಮಲತಾ ಹೇಳಿಕೆಗೆ ಗರಂ ಆಗಿ ಉತ್ತರಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್

ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಕೆಆರ್​ಎಸ್​ ಸುತ್ತಮುತ್ತ ಗಣಿಗಾರಿಕೆಯಿಂದ ಡ್ಯಾಂ ಸುರಕ್ಷತೆಗೆ ಅಪಾಯ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದರು. ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅದಕ್ಕೆ ಅಲ್ಲಿನ ಅಧಿಕಾರಿಗಳು ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ಇಲ್ಲ‌ ಎಂದು ವರದಿ ಕೊಟ್ಟಿದ್ದಾರೆ ಎಂದರು.

ಕಂದಾಯ ಸಚಿವ ಆರ್.ಅಶೋಕ್

ಈ ಕುರಿತು ಮುಖ್ಯಮಂತ್ರಿಗಳು, ನಾನು, ಮುರಗೇಶ್ ನಿರಾಣಿ ಎಲ್ಲರೂ ಹೇಳಿಕೆ ಕೊಟ್ಟಿದ್ದೇವೆ. ಬಿರುಕು ಹೇಳಿಕೆಯಿಂದ ಅಣೆಕಟ್ಟಿನ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಆತಂಕ ಉಂಟಾಗುತ್ತದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ನಾನು ಮಂಡ್ಯಕ್ಕೆ ಹೋಗುತ್ತೇನೆ. ಜಿಲ್ಲಾಧಿಕಾರಿಗಳನ್ನು‌ ಭೇಟಿ ಮಾಡಿ ಅವರಿಗೆ ಕೆಆರ್​ಎಸ್​ ಹಾಗೂ ಬೇಬಿ ಬೆಟ್ಟ ಸುತ್ತ ಏನಾಗಿದೆ ಎಂದು ವರದಿ ನೀಡುವಂತೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಜಟಾಪಟಿ: ಸಮಸ್ಯೆಯನ್ನು ವ್ಯಕ್ತಿಗತ ಮಾಡುವುದು ಸರಿಯಲ್ಲ- ನಳಿನ್​ ಕುಮಾರ್​ ಕಟೀಲ್​

Last Updated : Jul 14, 2021, 6:12 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.