ಮೈಸೂರು: ಅರಮನೆಗೆ ಅನಾಮಧೇಯ ವ್ಯಕ್ತಿಯಿಂದ ಹುಸಿ ಬಾಂಬ್ ಕರೆ ಬಂದಿದೆ ಎನ್ನಲಾಗಿದ್ದು, ಬಾಂಬ್ ನಿಷ್ಕ್ರಿಯದಳದಿಂದ ತಪಾಸಣೆ ನಡೆಸಲಾಗಿದೆ.
ಮೈಸೂರಿನ ಅರಮನೆಗೆ ಬೆಳಗ್ಗೆ 9:30 ರ ಸಮಯದಲ್ಲಿ ಅನಾಮಧೇಯ ವ್ಯಕ್ತಿ ಅರಮನೆಗೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದನಂತೆ. ಈ ಹಿನ್ನೆಲೆ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಅರಮನೆಯ ಸುತ್ತ ತೀವ್ರ ತಪಾಸಣೆ ನಡೆಸಿದೆ.
ಶ್ರೀಲಂಕಾದಲ್ಲಿ ಬಾಂಬ್ ದಾಳಿಯಾದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿ, ಅರಮನೆಯಲ್ಲಿ ತೀವ್ರ ಕಟ್ಟೆಚ್ಚರ ಕೈಗೊಂಡು ಭದ್ರತೆ ಹೆಚ್ಚಿಸಲಾಗಿದೆ.ಆದರೆ, ಯಾವುದೇ ರೀತಿಯ ಹುಸಿ ಬಾಂಬ್ ಕರೆ ಬಂದಿಲ್ಲ. ಮಾಮೂಲಿಯಂತೆ ತಪಾಸಣೆ ನಡೆಸಲಾಗಿದೆ ಎಂದು ಎಸಿಪಿ ಶೈಲೇಂದ್ರ ಮಾಹಿತಿ ನೀಡಿದ್ದಾರೆ.