ETV Bharat / state

ಸಂಸದ ಪ್ರತಾಪ್​ ಸಿಂಹ ಮನೆ ಮುಂದೆ ಕಸ ಸುರಿಯಲು ಯತ್ನ: ಪ್ರತಿಭಟನಾಕಾರರು ಪೊಲೀಸ್​ ವಶಕ್ಕೆ

ಸಂಸದ ಪ್ರತಾಪ್​ ಸಿಂಹ ಮನೆ ಮುಂದೆ ಖಾಲಿ ಬಾಟಲಿ,‌ ಗುಜರಿ ವಸ್ತುಗಳನ್ನು ಸುರಿಯಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

author img

By

Published : Apr 7, 2022, 2:22 PM IST

Protest
Protest

ಮೈಸೂರು:‌ ಇಲ್ಲಿನ ವಿಜಯನಗರದ ನಾಲ್ಕನೇ ಹಂತದಲ್ಲಿರುವ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ನಿವಾಸದ ಮುಂಭಾಗ ಖಾಲಿ ಬಾಟಲಿ ಹಾಗೂ ಗುಜರಿ ಸಾಮಗ್ರಿಗಳನ್ನು ಸುರಿಯಲು ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಚೋರನಹಳ್ಳಿ ಶಿವಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಮುಸ್ಲಿಮರು ಹಳ್ಳಿಗಳಲ್ಲಿ ಸ್ಕ್ರ್ಯಾಪ್ ವಸ್ತುಗಳು, ಹಳೆ ಪೇಪರ್, ಗುಜರಿ ವಸ್ತುಗಳನ್ನು ಖರೀದಿ ಮಾಡಲು ಬರುತ್ತಿಲ್ಲ. ಅದ್ದರಿಂದ ನಮಗೆ ನಷ್ಟವಾಗುತ್ತದೆ. ಈ ನಷ್ಟವನ್ನು ಪ್ರತಾಪ್ ಸಿಂಹ ಅವರು ಸರಿದೂಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಾಪ್​ ಸಿಂಹ ಮನೆ ಮುಂದೆ ಕಸ ಸುರಿಯಲು ಯತ್ನ

ಇದನ್ನೂ ಓದಿ: ಹಿರಿಯರಿಗೆ ಕೊಕ್ ಕೊಟ್ಟರೂ ಓಕೆ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರು ಸಂತೋಷ: ಉಮೇಶ್ ಕತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.