ETV Bharat / state

ಕೆಆರ್​ಎಸ್​ ರಸ್ತೆ ಫ್ಲೈಓವರ್ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ ಸಿಂಹ - M P Prathap simha reviewing flyover work in Mysore

ಮೈಸೂರಿನ ಕೆಆರ್​ಎಸ್​ ರಸ್ತೆಯಲ್ಲಿ ನಿರ್ಮಿಸಲಿರುವ ಫ್ಲೈಓವರ್ ಕಾಮಗಾರಿಯನ್ನು ಸಂಸದ ಪ್ರತಾಪ​ ಸಿಂಹ ಅಧಿಕಾರಿಗಳೊಂದಿಗೆ ಬಂದು ಪರಿಶೀಲಿಸಿದ್ದಾರೆ.

pratapasimha-inspected-flyover-works-on-krs-road-at-mysore
ಕೆಆರ್​ಎಸ್​ ರಸ್ತೆ ಫ್ಲೈಓವರ್ ಕಾಮಗಾರಿ ಪರಿಶೀಲಿಸಿದ ಪ್ರತಾಪಸಿಂಹ
author img

By

Published : Jan 3, 2021, 8:26 PM IST

ಮೈಸೂರು: ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಆರ್‌ಎಸ್‌ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್​ಮೆಂಟ್​ನಿಂದ ರಾಯಲ್ ಇನ್ ಹೋಟೆಲ್ ವರೆಗೆ ಫ್ಲೈಓವರ್ ನಿರ್ಮಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಸ್ಥಳ ಪರಿಶೀಲನೆ ನಡೆಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2016-17ರ ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಕೆಆರ್‌ಎಸ್‌ ರಸ್ತೆಯ ರೈಲ್ವೆ ಹಳಿಗೆ ಓವರ್ ಬ್ರಿಡ್ಜ್ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ, ಆಗ ರಿಂಗ್ ರಸ್ತೆ ನಗರಾಭಿವೃದ್ಧಿ ಮುಡಾ ನಿಯಂತ್ರಣದಲ್ಲಿತ್ತು. ಮುಂದಿನ ಹಂತ ಪಿಡಬ್ಲ್ಯೂಡಿ ಮತ್ತು ನಗರಪಾಲಿಕೆ ನಿಯಂತ್ರಣದಲ್ಲಿತ್ತು. ಹಾಗಾಗಿ ರೈಲ್ವೆ, ಮುಡಾ, ನಗರಪಾಲಿಕೆ, ಪಿಡಬ್ಲ್ಯೂಡಿ ಈ ನಾಲ್ಕು ಇಲಾಖೆ ಸೇರಿ ಒಂದೇ ಒಂದು ಫ್ಲೈ ಓವರ್ ಓವರ್ ಮಾಡಬೇಕಿತ್ತು. ಆದರೆ ಇಲಾಖೆಗಳಲ್ಲಿನ ಹೊಂದಾಣಿಕೆ ಕೊರತೆಯಿಂದಾಗಿ ಇದು ಆಗಿರಲಿಲ್ಲ ಎಂದರು.

ಕೊನೆಗೆ ಅದನ್ನು ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ರೈಲ್ವೆ ಅಂಡರ್ ಪಾಸ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಮೊದಲಿನ ಯೋಜನೆಯಂತೆ ಫ್ಲೈ ಓವರ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಓದಿ: 'ಕವಿರತ್ನ ಕಾಳಿದಾಸ' ಖ್ಯಾತಿಯ ಶನಿ ಮಹದೇವಪ್ಪ ವಿಧಿವಶ'

ಫ್ಲೈ ಓವರ್ ನಿರ್ಮಾಣದ ಅಂದಾಜು ವೆಚ್ಚ ಈ ಹಿಂದೆ 41 ಕೋಟಿ ರೂ. ಆಗಿತ್ತು. ರೈಲ್ವೆಯಿಂದ 10.7 ಕೋಟಿ ರೈಲ್ವೆ ಕೊಡಬೇಕಿತ್ತು. ಅದನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಮುಡಾ ನಿಯಂತ್ರಣದಲ್ಲಿದ್ದಂತಹ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿಕೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೊಡ್ಡ ಮೊತ್ತದ ಹಣ ಕೊಡಬೇಕಾಗಿದೆ. ಜೊತೆಗೆ ನಗರಪಾಲಿಕೆ, ಪಿಡಬ್ಲ್ಯೂಡಿ ಅವರಿಗೆ ಸಣ್ಣ ಪ್ರಮಾಣದ ಹಣ ಕೊಡಬೇಕಾಗುತ್ತದೆ. ಅದನ್ನು ಆದಷ್ಟು ಬೇಗ ಕೊಡಿಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು. ಪುನರ್ ವಿಮರ್ಶಿಸಿದ ಡಿಪಿಆರ್ ಆದ ನಂತರ ಅಂದಾಜು ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ರೈಲ್ವೆ ಲೆವೆಲ್ ಕ್ರಾಸಿಂಗ್ ಇದ್ದು, ಪ್ರವಾಸಿಗರು ಸಲೀಸಾಗಿ ಕೆಆರ್‌ಎಸ್​ಗೆ ತೆರಳಲು ಅಡಚಣೆ ಆಗುತ್ತಿದೆ. ಮೊದಲಿಗೆ ಗ್ರೇಡ್ ಸಪ್ರೇಟರ್ ನಿರ್ಮಿಸುವ ಪ್ರಸ್ತಾಪ ಇದೆ. ಈಗ ಅದನ್ನು ಕೈ ಬಿಟ್ಟು ಫ್ಲೈಓವರ್ ಮಾಡಿ ಕೆಆರ್‌ಎಸ್‌ ರಸ್ತೆ ಕಡೆಗೆ ಸರಾಗವಾಗಿ ಚಲಿಸುವುದಕ್ಕೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.