ETV Bharat / state

ನನಗೆ ಹೊಗಳಿಕೆ ಅಂದ್ರೆ ಭಯ, ತೆಗಳಿಕೆಯನ್ನ ಮೆಟ್ಟಿಲು ಮಾಡಿಕೊಳ್ಳುವೆ: ಸಿಎಂ ಬಸವರಾಜ ಬೊಮ್ಮಾಯಿ - ಸೂತ್ತರು ಜಾತ್ರೆ ಸಮಾರೋಪ ಸಮಾರಂಭ ಆರಂಭ

ಸುತ್ತೂರು ಶ್ರೀ ಕ್ಷೇತ್ರಗಳಂತಹ ಈ ಪುಣ್ಯ ಸ್ಥಾನಗಳ ಫಲವಾಗಿ ಈ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿಲ್ಲ - ಧರ್ಮ ರಕ್ಷಣೆ ಜೊತೆ ಜನ ಬೆರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ - ಬಿ ಎಲ್​ ಸಂತೋಷ್

praise-is-fear-for-me-ridicule-is-a-stepping-stone-cm-basavaraja-bommai
ನನಗೆ ಹೊಗಳಿಕೆ ಅಂದ್ರೆ ಭಯ, ತೆಗಳಿಕೆಯನ್ನು ಮೆಟ್ಟಿಲು ಮಾಡಿಕೊಳ್ಳುವೆ: ಸಿಎಂ ಬಸವರಾಜ ಬೊಮ್ಮಾಯಿ
author img

By

Published : Jan 22, 2023, 10:37 PM IST

Updated : Jan 22, 2023, 10:57 PM IST

ಮೈಸೂರು: ವಿರೋಧ ಪಕ್ಷದ ನಾಯಕರು ಅಸಂಬದ್ಧವಾಗಿ ಮಾತನಾಡಿದ್ದಾರೆ ಆದರೆ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ನನಗೆ ಹೊಗಳಿಕೆ ಅಂದ್ರೆ ಭಯ, ತೆಗಳಿಕೆಯನ್ನು ಮೆಟ್ಟಿಲು ಮಾಡಿಕೊಂಡು ಹೋಗೋದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ‌ ಮಹೋತ್ಸವದಲ್ಲಿ ಭಜನಾ ಮೇಳದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಒಂದೇ ರೀತಿ ತೆಗೆದುಕೊಂಡು ಹೋಗುವ ಸಮ ಪ್ರಜ್ಞೆ ನಮ್ಮದಾಗಬೇಕು. ಧರ್ಮದಾಕ್ಷಣೆ ಜೊತೆ ಜನ ಬೆರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತದೆ. ನಮ್ಮ ನಡವಳಿಕೆ ಹಾಗೂ ಆಚಾರ ವಿಚಾರ ನಮ್ಮ ಸಂಸ್ಕೃತಿಯಿಂದ ಬರುತ್ತದೆ.

ನಾಗರಿಕತೆ ಹಾಗೂ ಸಂಸ್ಕೃತಿ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ನಮ್ಮ ಹತ್ತಿರ ಇರೋದು ನಾಗರಿಕತೆ. ನಾನು ಏನಾಗಿದ್ದೇನೆ ಎನ್ನುವುದು ಸಂಸ್ಕೃತಿ, ಮನುಷ್ಯ ಮಾತಿನಿಂದ ದೊಡ್ಡವನಾಗುತ್ತಾರೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕರ ಮಾತುಗಳು ದೊಡ್ಡವರ ಸಣ್ಣತನವನ್ನು ತೋರಿಸುತ್ತದೆ. ಸ್ಥಾನದಿಂದ ಗೌರವ ಬರುವುದು ಬೇರೆ ಆ ಸ್ಥಾನದ ಗೌರವವನ್ನು ನಾವು ಉಳಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆಗೆ ಏನು ಉಳಿಸಿಕೊಂಡು ಹೋಗಬೇಕು ಎಂಬುದು ಗೊತ್ತಾಗಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ನಮ್ಮ ದೇಶದಲ್ಲಿ ಕೆಲವರು ಎಡಬಿಡಂಗಿಗಳಿದ್ದಾರೆ. ಅವರಿಗೆ ನಾವು ಏನೇ ಮಾಡಿದರು ಅದು ತಪ್ಪು. ಕೇವಲ ತಪ್ಪು ಹುಡುಕುವುದೇ ಅವರ ಕೆಲಸ. ಕೋವಿಡ್ ಸಮಯದಲ್ಲಿ ಜನರು ಸರ್ಕಾರದ ಬಗ್ಗೆ ಬೇಸರ ಪಟ್ಟುಕೊಳ್ಳಲಿಲ್ಲ. ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜನ ಕಷ್ಟಗಳನ್ನು ಅನುಭವಿಸಿದರು. ಆದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಸಹಕಾರಿಯಾಗಲು ಕಾನೂನು ಕನ್ನಡ ನಿಘಂಟು ತಯಾರಿಸಿ: ಸಿಎಂ ಬೊಮ್ಮಾಯಿ ಸೂಚನೆ

ಈ ದೇಶದಲ್ಲಿನ ಸುತ್ತೂರು ಶ್ರೀ ಕ್ಷೇತ್ರಗಳಂತಹ ಈ ಪುಣ್ಯ ಸ್ಥಾನಗಳ ಫಲವಾಗಿ ಭಾರತ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿಲ್ಲ. ಬೇರೆ ದೇಶ ಆಗಿದ್ದರೆ ಜನ ಬೀದಿ ಬೀದಿಗೆ ಬೆಂಕಿ ಹಚ್ಚುತ್ತಿದ್ದರು. ಸತ್ಯ ಸುಳ್ಳಿನ ಅಂತರ ಬಹಳ ಕಡಿಮೆಯಾಗಿದೆ. ಸಮಾಜದ ಆರೋಗ್ಯ ದೃಷ್ಟಿಯಿಂದ ಸತ್ಯ - ಸುಳ್ಳಿನ ಅಂತರ ಹೆಚ್ಚಾಗಬೇಕು. ಒಬ್ಬ ಮನುಷ್ಯ ಕಾಲಕ್ಕೆ ತಕ್ಕಂತೆ ಒಳ್ಳೆಯದು ಮಾಡುತ್ತಾನೆ ಕೆಟ್ಟದು ಮಾಡುತ್ತಾನೆ. ಒಬ್ಬ ಮನುಷ್ಯನೊಳಗೆ ಒಳ್ಳೆಯವನೂ ಇದ್ದಾನೆ, ಕೆಟ್ಟವನೂ ಇದ್ದಾನೆ. ಸುತ್ತೂರಿನಂತಹ ಧಾರ್ಮಿಕ ಕ್ಷೇತ್ರಗಳ ಮೂಲಕ ಮಾತ್ರ ಮನುಷ್ಯನ ವರ್ತನೆಗಳು ಬದಲಾಗುತ್ತದೆ‌ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್, ನಾಗೇಶ್, ಶಾಸಕರಾದ ನಿರಂಜನ್, ಹರ್ಷವರ್ಧನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಮನುಷ್ಯನಿಗೆ ಧರ್ಮ ಇರಬೇಕು, ಧರ್ಮಕ್ಕೋಸ್ಕರ ಮನುಷ್ಯನಿಲ್ಲ: ಸಿದ್ದರಾಮಯ್ಯ

Last Updated : Jan 22, 2023, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.