ಮೈಸೂರು : ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಾನೆ ಎಂದು ಹೋಟೆಲ್ಗೆ ನುಗ್ಗಿ ಮಾಲೀಕನ ಮೇಲೆ ಇನ್ಸ್ಪೆಕ್ಟರ್ ಹಲ್ಲೆ ಮಾಡಿರುವ ಘಟನೆ ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬಂಬೂ ಬಜಾರ್ನ ಬಿಗ್ ಗ್ರಿಲ್ ಹೋಟೆಲ್ನ ಮಾಲೀಕ ಜಾವೇದ್ ಅಹ್ಮದ್ ಖಾನ್ ಎಂಬುವರು ರಾತ್ರಿ 10 ಗಂಟೆವರೆಗೂ ಹೋಟೆಲ್ ತೆರೆದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮಂಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಘು ಬುಧವಾರ ರಾತ್ರಿ ಹೋಟೆಲ್ಗೆ ನುಗ್ಗಿ ಮಾಲೀಕನಿಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದೀಯಾ? ಎಂದು ಕ್ಯಾಶ್ ಕೌಂಟರ್ನಲ್ಲೇ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಕಮಿಷನರ್ ಭೇಟಿ ಮಾಡಿ ಮನವಿ
ಕೋವಿಡ್ನಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಪೊಲೀಸರು ಈ ರೀತಿ ಹೋಟೆಲ್ಗೆ ನುಗ್ಗಿ ಮಾಲೀಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಈ ಸಂಬಂಧ ಹಲ್ಲೆ ಮಾಡಿರುವ ಇನ್ಸ್ಪೆಕ್ಟರ್ ಮೇಲೆ ಕ್ರಮಕೈಗೊಳ್ಳಬೇಕೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಘಟನೆ ಕುರಿತ ಸಿಸಿಟಿವಿ ದೃಶ್ಯವನ್ನು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರಿಗೆ ನೀಡಿದ್ದಾರೆ.
ಓದಿ: ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳ ರಕ್ಷಣೆ ಪ್ರಶ್ನೆಯೇ ಇಲ್ಲ: ಮಾಧುಸ್ವಾಮಿ ಭರವಸೆ