ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ ಕುರಿತ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.
ಮೈಸೂರು ವಿವಿಯ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣ ಎಂಬುವರು ಈ ಫಲಕ ಹಿಡಿದುಕೊಂಡಿದ್ದು ಎಂಬುದು ತಿಳಿದುಬಂದಿದೆ. ಈಕೆ ಚೆನ್ನೈ ಮೂಲದವರಾಗಿದ್ದು, 2016ರ ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ವಿದ್ಯಾಬ್ಯಾಸ ಮಾಡಿದ್ದರು. ಪತ್ರಿಕೋದ್ಯಮ ವ್ಯಾಸಂಗದ ಬಳಿಕ ಗುಜರಾತ್ನಲ್ಲಿ ಫೋಟೋ ಜರ್ನಲಿಸ್ಟ್ ಕೆಲಸ ಮಾಡುತ್ತಿದ್ದ ಈಕೆ, ಮೂರು ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದರು.
ವರದಿ ಸಲ್ಲಿಸಿದ ಕುಲಸಚಿವ:
ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ ' ನಾಮಫಲಕ ಪ್ರದರ್ಶನಕ್ಕೆ ರಾಜ್ಯಪಾಲರು ವರದಿ ಕೇಳಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಸಚಿವ ಶಿವಪ್ಪ ಅವರು ಇಂದು ವರದಿ ಕಳುಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದ ಎಲ್ಲರ ವಿರುದ್ಧ ಎಫ್ ಆರ್ ಐ ದಾಖಲು ಮಾಡುವಂತೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.