ETV Bharat / state

ಲಾಕ್‌ಡೌನ್ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಪೊಲೀಸರ ಡ್ರಿಲ್

ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಲಾಕ್​ಡೌನ್​ ಉಲ್ಲಂಘಿಸಿ ಕ್ರಿಕೆಟ್​​ ಆಡುತ್ತಿದ್ದ ಯುವಕರಿಗೆ ಮೈದಾನದಲ್ಲಿಯೇ ಬಸ್ಕಿ ಹೊಡೆಸಿದ ಪೊಲೀಸರು ಇನ್ನೊಮ್ಮೆ ಕ್ರಿಕೆಟ್​ ಆಡದಂತೆ ಎಚ್ಚರಿಕೆ ನೀಡಿದ್ದಾರೆ.

author img

By

Published : Apr 30, 2020, 7:23 PM IST

Police drill for youth
ಕ್ರಿಕೆಟ್​ ಆಡುತ್ತಿದ್ದ ಯುವಕರಿಗೆ ಡ್ರಿಲ್​ ಮಾಡಿದ ಪೊಲೀಸರು

ಮೈಸೂರು: ಲಾಕ್‌ಡೌನ್ ಉಲ್ಲಂಘಿಸಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ನಜರಾಬಾದ್​ ಪೊಲೀಸರು ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ್ದಾರೆ.

ಸಿದ್ದಾರ್ಥ ಬಡಾವಣೆಯ ಮೈದಾನದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಗುಂಪು ಸೇರಿ ಕ್ರಿಕೆಟ್ ಆಡುತ್ತಿದ್ದ ವೇಳೆ ಆಗಮಿಸಿದ ಪೊಲೀಸರು, ಕ್ರಿಕೆಟ್ ಬ್ಯಾಟ್, ಬಾಲ್‌ಗಳನ್ನು ವಶಪಡಿಸಿಕೊಂಡರು. ಬಳಿಕ ಆಟಗಾರರಿಗೆ ನಿಯಮ ಉಲ್ಲಂಘಿಸಿದ ಪರಿಣಾಮವಾಗಿ ಬಸ್ಕಿ ಹೊಡೆಸಿದರು.

ನಂತರ ಕ್ರಿಕೆಟ್​​ ಆಡುತ್ತಿದ್ದ ಯುವಕರಿಗೆ ಸ್ಯಾನಿಟೈಸರ್​​ನಲ್ಲಿ ಕೈ ತೊಳೆಯುವಂತೆ ಸೂಚಿಸಿ ಮಾಸ್ಕ್​​ ನೀಡಿದ ಪೊಲೀಸರು, ಇನ್ನೊಮ್ಮೆ ಕ್ರಿಕೆಟ್​ ಆಡಿದರೆ ಕಠಿಣ ಕ್ರಮ ತೆಗುದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.