ಮೈಸೂರು: ಶಬರಿಮಲೆಗೆ ಹೊರಟಿದ್ದ ಪೊಲೀಸ್ ಪೇದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಳಲೆ ನಾಲೆಯಲ್ಲಿ ನಡೆದಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ನಿವಾಸಿ ಚಿದಾನಂದ (30) ಮೃತ ದುರ್ದೈವಿ. ಕಡೂರಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿದಾನಂದ್ ಮಾಲಾಧಾರಣೆ ಮಾಡಿ ಶಬರಿಮಲೆಗೆ ಹೊರಟಿದ್ದರು.
ಆ ಸಂದರ್ಭದಲ್ಲಿ ನಿನ್ನೆ ಕಳಲೆ ಬಳಿಯ ನಾಲೆಗೆ ಇಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಮೃತ ದೇಹವನ್ನು ಹೊರತೆಗೆಯಲಾಗಿದೆ. ಈ ಸಂಬಂಧ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.