ETV Bharat / state

ಉಂಡ ಮನೆಗೆ ಕನ್ನ‌ ಹಾಕಿದ ಖದೀಮ ಅರೆಸ್ಟ್: 6.50 ಲಕ್ಷ ರೂ. ಮೌಲ್ಯದ ಮೊಬೈಲ್ ವಶ - Mysore crime latest news

ಫೈನಾನ್ಸ್ ಕಚೇರಿಗೆ ಕನ್ನ ಹಾಕಿದ್ದ ಖದೀಮನನ್ನು ಪೊಲೀಸರು ಬಂಧಿಸಿ, ಆತನಿಂದ 6.5 ಲಕ್ಷ ಮೌಲ್ಯದ 43 ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

Mobile theft
Mobile theft
author img

By

Published : Sep 3, 2020, 9:15 PM IST

ಮೈಸೂರು: ಫೈನಾನ್ಸ್ ಕಚೇರಿಗೆ ಕನ್ನ ಹಾಕಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಕೃಷ್ಣೇಗೌಡ (22) ಬಂಧಿತ ಆರೋಪಿ. ಈತ ನರಸೀಪುರ ಪಟ್ಟಣದ ಹೆಳವರ ಹುಂಡಿ ಗ್ರಾಮದಲ್ಲಿರುವ ಸ್ವಂದನ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.

ಬಳಿಕ ಕಳೆದ ಒಂದುವರೆ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಈತ ಕಚೇರಿಯ ಬೀಗವನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಹೋಗಿದ್ದನು.

ನಂತರ ಪ್ಲಾನ್ ರೂಪಿಸಿ ಸ್ವಂದನ ಫೈನಾನ್ಸ್ ಕಚೇರಿಯ ಮುಂಭಾಗದ ಬಾಗಿಲ ಬೀಗವನ್ನು ಹಾರೆಯಿಂದ ಹೊಡೆದು ನಕಲಿ ಕೀ ಬಳಸಿ ಕಚೇರಿಯಲ್ಲಿದ್ದ 43 ಮೊಬೈಲ್​ಗಳನ್ನು ಕಳ್ಳತನ ಮಾಡಿದ್ದನು. ಈ‌ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 6.5 ಲಕ್ಷ ಮೌಲ್ಯದ 43 ಮೊಬೈಲ್ ಗಳು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.