ETV Bharat / state

ಜಿಲ್ಲೆಯಾದ್ಯಂತ ಬೈಕ್​ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ ಪೊಲೀಸರು..

ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲೆ ಸೇರಿದಂತೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

Police arrested accused who theft bikes
ಬೈಕ್​ ಕಳ್ಳತನ ಆರೋಪಿ ಬಂಧನ
author img

By

Published : Dec 14, 2019, 11:33 PM IST

ಮೈಸೂರು: ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲೆ ಸೇರಿದಂತೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿ ಗ್ರಾಮದ ಕೀರ್ತಿಕುಮಾರ್(24) ಬಂಧಿತ ಆರೋಪಿ. ಆತನಿಂದ ಸುಮಾರು 12.65 ಲಕ್ಷ ರೂ.ಮೌಲ್ಯದ ವಿವಿಧ ಮಾದರಿಯ 16 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಗ್ರಾಮದ ಬಸವನಗುಡಿ ಸರ್ಕಲ್ ಬಳಿ ದ್ವಿಚಕ್ರ ವಾಹನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 16 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ.

Intro:ಕ್ರೈಮ್Body:ಮೈಸೂರು: ಬೈಕ್ ಕಳ್ಳನನ್ನು ಬಂಧಿಸಿ, ೧೨.೬೫ ಲಕ್ಷ ರೂ.ಮೌಲ್ಯದ ವಿವಿಧ ಮಾದರಿಯ ೧೬ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಉತ್ತೇನಹಳ್ಳಿ ಗ್ರಾಮದ ಕೀರ್ತಿಕುಮಾರ್(೨೪) ಬಂಧಿತ ಖದೀಮ. ಮೇಟಗಳ್ಳಿ ಪೊಲೀಸ್ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಹೆಬ್ಬಾಳ ಗ್ರಾಮದ ಬಸವನಗುಡಿ ಸರ್ಕಲ್ ಬಳಿ ದ್ವಿಚಕ್ರ ವಾಹನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆರೋಪಿಯು ಕಳೆದ ಒಂದೂವರೆ ವರ್ಷಗಳಿಂದ ಮೈಸೂರು ನಗರ, ಮೈಸೂರು ಜಿಲ್ಲೆ, ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಮಾರಾಟ ಮಾಡಿದ್ದ ೦೩-ರಾಯಲ್ ಎನ್‌ಫೀಲ್ಡ್, ೦೩-ಪಲ್ಸರ್ ಬೈಕ್, ೦೧-ಯಮಹಾ ಎಫ್ ಝಡ್, ೦೧-ಕೆ.ಟಿ.ಎಂ ಡ್ಯೂಕ್ ಹಾಗೂ ೦೮-ಹೋಂಡಾ ಡಿಯೋ ಒಟ್ಟು ೧೬ ದ್ವಿಚಕ್ರ ವಾಹನಗಳ ಬೆಲೆ ರೂ.೧೨.೬೫  ಲಕ್ಷ ಆಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈತನ ಬಂಧನದಿಂದ ಜಯಲಕ್ಮೀಪುರಂ ಠಾಣೆಯ ೦೨, ದೇವರಾಜ ಠಾಣೆಯ ೦೨, ಮಂಡಿ ಠಾಣೆಯ ೦೧, ವಿಜಯನಗರ ಠಾಣೆಯ ೦೧, ಮೈಸೂರು ಜಿಲ್ಲಾ ಕೆ.ಆರ್. ನಗರ ಠಾಣೆ, ಹುಣಸೂರು ಠಾಣೆ, ಪಿರಿಯಾಪಟ್ಟಣ ಠಾಣೆ, ಇಲವಾಲ ಠಾಣೆಯ ತಲಾ ಒಂದೊಂದು ಪ್ರಕರಣ ಹಾಗೂ ಬೆಂಗಳೂರು ನಗರದ ರಾಜಾಜಿನಗರ ಪೊಲೀಸ್ ಠಾಣೆಯ ೦೨, ಚಂದ್ರ ಲೇಔಟ್ ಠಾಣೆಯ ೦೧, ಕಲಾಸಿಪಾಳ್ಯ ಠಾಣೆಯ ೦೧, ವಿಜಯನಗರ ಠಾಣೆಯ ೦೧ ಹಾಗೂ ಗಿರಿನಗರ ಪೊಲೀಸ್ ಠಾಣೆಯ ೦೧ ಪ್ರಕರಣಗಳು ಸೇರಿದಂತೆ ಒಟ್ಟು ೧೬ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ. Conclusion:ಕ್ರೈಮ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.