ಮೈಸೂರು : ನಿರಂತರ ಮಳೆಯಿಂದ ಹೆಚ್‌ಡಿಕೋಟೆ ತಾಲೂಕಿನ ಹೆಬ್ಬಳ್ಳ ಕೆರೆ ಕೋಡಿ ಬಿದ್ದದೆ. ಇದರಿಂದಾಗಿ ಕೋಡಿಯಲ್ಲಿ ಮೀನು ಹಿಡಿಯಲು ಯುವಕರು ಮುಗಿಬಿದ್ದಿದ್ದಾರೆ.
ಹೆಬ್ಬಳ್ಳದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ. ಕೋಡಿ ಬೀಳುವ ಕೆರೆಯಲ್ಲಿ ಯುವಕರು ಬಲೆ ಹಿಡಿದು ಮೀನು (Fish) ಹಿಡಿಯಲು ಮುಂದಾಗಿದ್ದಾರೆ. ಕೆರೆಯಿಂದ ಹೊರಗೆ ಬೃಹತ್ ಗಾತ್ರದ ಮೀನುಗಳು ಬರುತ್ತಿವೆ. ಯುವಕರು ಗುಂಪು ಕಟ್ಟಿಕೊಂಡು ಬಲೆಗಳ ಸಮೇತ ಮೀನು ಹಿಡಿಯುತ್ತಿದ್ದಾರೆ.