ಮೈಸೂರು : ವೈದ್ಯೋ ನಾರಾಯಣ ಹರಿ ಅಂತಾರೆ. ಆದರೆ, ಈ ವೈದ್ಯ ಮಾತ್ರ ಕುಡಿಯೋದೆ ನನ್ನ ಬ್ಯುಸಿನೆಸ್ಸು ಅಂತಾ ದಿನಾ ಎಣ್ಣೆ ಹಾಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದಾನೆ.
ನಿತ್ಯ ಕುಡಿದು ಆಸ್ಪತ್ರೆಗೆ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯನಿಗೆ ಜಿಪಂ ಸದಸ್ಯ ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ವ್ಯಾಸರಾಜಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯ ಸಿದ್ದರಾಜು ಪ್ರತಿ ದಿನ ಕುಡಿದು ಆಸ್ಪತ್ರೆಗೆ ಬರುತ್ತಿದ್ದಾನೆ.
ಚಿಕಿತ್ಸೆಗೆ ಬರುವ ರೋಗಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಕುಡಿದು ಬಂದು ರಂಪಾಟ ಮಾಡುತ್ತಿದ್ದಾನಂತೆ. ಈ ಹಿನ್ನೆಲೆ ವೈದ್ಯ ಸಿದ್ದರಾಜುಗೆ, ಜಿಲ್ಲಾ ಪಂಚಾಯತ್ ಸದ್ಯಸ ಜಯಪಾಲ್ ಭರಣಿ ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.