ಮೈಸೂರು: ನಟ ಪುನೀತ್ ರಾಜ್‌ಕುಮಾರ್ (Punith Rajkumar) ನಿಧನದ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ಬಸವನಹಳ್ಳಿ ಗ್ರಾಮಸ್ಥರು ಅಭಿಮಾನಿಗಳಿಗೆ ಬಾಡೂಟ ಹಾಕಿದರು.
ಅಗಲಿದ ನಟನ ಪುಣ್ಯಸ್ಮರಣೆ ಮಾಡಿದ ಗ್ರಾಮಸ್ಥರು 2 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡಿದ್ದಾರೆ. ಗ್ರಾಮದ ಮಂಚೇಗೌಡ ಎಂಬವರು ಕೇಶಮುಂಡನ ಮಾಡಿಸಿಕೊಂಡಿದ್ದು, ಅಪ್ಪು ಅವರನ್ನು ನೆನೆದು ಅತ್ತಿದ್ದಾರೆ.
'ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಬಂದಿದ್ದರು. ಹೀಗಾಗಿ, ಅವರಿಗೆ ಹೃದಯಪೂರ್ವಕ ನಮನ ಸಲ್ಲಿಸುವ ಉದ್ದೇಶದಿಂದ ಗ್ರಾಮಸ್ಥರೆಲ್ಲಾ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದು ಗ್ರಾಮಸ್ಥ ಬಸವರಾಜು ತಿಳಿಸಿದರು.
ಇದನ್ನೂ ಓದಿ: ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು: ವಾಟಾಳ್ ನಾಗರಾಜ್