ETV Bharat / state

ಮೈಸೂರಿನ ಚಂದ್ರಮೌಳೇಶ್ವರ ದೇವರಿಗೆ 45 ವರ್ಷದ ನಂತರ ಆಭರಣ ಧಾರಣೆ ಯೋಗ - ದೇವಾಲಯಕ್ಕೆ ಬಂದ ದಾನಿಗಳ ಕುಟುಂಬ

45 ವರ್ಷಗಳ ನಂತರ ದೇವಾಲಯಕ್ಕೆ ಬಂದ ದಾನಿಗಳ ಕುಟುಂಬದವರ ಕೋರಿಕೆಯಂತೆ ಆಭರಣಗಳ ಧಾರಣೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.

God Chandramouleshwara
ಚಂದ್ರಮೌಳೇಶ್ವರ ದೇವರು
author img

By

Published : Sep 22, 2022, 3:30 PM IST

Updated : Sep 22, 2022, 3:57 PM IST

ಮೈಸೂರು: ‌ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿರುವ ಚಂದ್ರಮೌಳೇಶ್ವರ ದೇವರಿಗೆ 45 ವರ್ಷಗಳ ನಂತರ ಆಭರಣ ಧಾರಣೆ ಯೋಗ ಒದಗಿ ಬಂದಿದೆ‌. ನಾಲ್ವಡಿ ಕೃಷ್ಣರಾಜ ಒಡೆಯರ್​ರಿಂದ 1932ರಲ್ಲಿ ದೇವಾಲಯ ನಿರ್ಮಾಣ ಮಾಡಿಸಿ, ಕಾಶಿಯಿಂದ ಬಾಣಲಿಂಗ ತರಿಸಿ ಪ್ರತಿಷ್ಠಾಪನೆ ಮಾಡಿಸಿದ್ದರು.

ಗ್ರಾಮದಲ್ಲಿ ಪುರೋಹಿತರಾಗಿದ್ದ ಸುಬ್ಬಾಶಾಸ್ತ್ರಿ ಅವರಿಂದ ಆಭರಣಗಳ ದೇಣಿಗೆ ನೀಡಲಾಗಿದ್ದು, ಚಂದ್ರಮೌಳೇಶ್ಬರನಿಗೆ ನಾಗಾಭಾರಣ, ಬೆಳ್ಳಿ ಕೊಳಗ, ಅಮ್ಮನವರಿಗೆ ಕಿರೀಟ, ಹಸ್ತ‌ ಕಮಲಗಳು, ಪಾದ ಸೇರಿ ವಿವಿಧ ಬಗೆಯ ಆಭರಣಗಳನ್ನು ದೇಣಿಗೆ ನೀಡಲಾಯಿತು. 45 ವರ್ಷಗಳ ನಂತರ ದೇವಾಲಯಕ್ಕೆ ಬಂದ ದಾನಿಗಳ ಕುಟುಂಬದವರ ಕೋರಿಕೆಯಂತೆ ಆಭರಣಗಳ ಧಾರಣೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.

ಚಂದ್ರಮೌಳೇಶ್ವರ ದೇವರಿಗೆ 45 ವರ್ಷದ ನಂತರ ಆಭರಣ ಧಾರಣೆ ಯೋಗ!

ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳಿದ್ದರೂ, ಚಂದ್ರಮೌಳೇಶ್ವರನಿಗೆ ಧಾರಣೆಯ ಯೋಗ ಕೂಡಿ ಬಂದಿರಲಿಲ್ಲ. ಈಗ ಕುಟುಂಬದವರ ಮನವಿ ಮೇರೆಗೆ ಇನ್ಮುಂದೆ ಪ್ರತಿ ವರ್ಷ ಶಿವರಾತ್ರಿಗೆ ಆಭರಣಗಳ ಧಾರಣೆ ಮಾಡಲಾಗುವುದು. ಕುಟುಂಬದವರಿಂದ ದೇವಾಲಯದಲ್ಲಿ ವೇದ ಪಾರಾಯಣ, ರುದ್ರಾಭಿಷೇಕ, ಹೋಮ ಹವನ ಪೂಜೆ ನಡೆಸಲಾಯಿತು.

ಸುಬ್ಬಾಶಾಸ್ತ್ರಿ, ರಾಮಾ ಶಾಸ್ತ್ರಿಗಳ ಇಡೀ ಕುಟುಂಬದ 60 ಜನರಿಂದ ವಿಶೇಷ ಪೂಜೆ ನಡೆಯಿತು. ಆಭರಣಗಳ ಧಾರಣೆಯಿಂದ ಚಂದ್ರಮೌಳೇಶ್ವರ ಹಾಗೂ ಅಮ್ಮನವರು ಕಂಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯಿಂದ ದೇವಾಲಯ ನಿರ್ಮಾಣ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ರಾಮನಗರ

Last Updated : Sep 22, 2022, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.