ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮೆಡಿಕಲ್ ಆಕ್ಸಿಜನ್ ಉತ್ಪಾದಕರು ಮತ್ತು ರೀಫಿಲ್ಲಿಂಗ್ ಸಂಸ್ಥೆಗಳೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು.
ಕೋವಿಡ್ ಹಿನ್ನೆಲೆ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಆಕ್ಸಿಜನ್ ನೀಡಬೇಕು. ವೈದ್ಯಕೀಯ ಉದ್ದೇಶಕ್ಕೆ ಮತ್ತು ಸರ್ಕಾರ ತಿಳಿಸುವ ಸಂಸ್ಥೆಗಳಿಗೆ ಮಾತ್ರ ಆಕ್ಸಿಜನ್ ನೀಡಬೇಕು ಎಂದು ಸೂಚಿಸಿದರು.
ಸರ್ಕಾರದ ಮಾರ್ಗಸೂಚಿಯ ಪಾಲನೆ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಕ್ಸಿಜನ್ ಉತ್ಪಾದಕ ಮತ್ತು ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಗಳಿಗೆ ಒಬ್ಬೊಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಮೆಡಿಕಲ್ ಆಕ್ಸಿಜನ್ ಪೂರೈಸುವುದು ಈ ಸಂಸ್ಥೆಗಳು ಡ್ರಗ್ಸ್ ಕಂಟ್ರೋಲರ್ ಜವಾಬ್ದಾರಿ, ಯಾವ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗಬಾರದು ಎಂದು ಹೇಳಿದರು.