ETV Bharat / state

ಕರೆದಿದ್ದು 242 ಹುದ್ದೆಗೆ ಅಪ್ಲಿಕೇಶನ್ ಬಂದಿದ್ದು 27 ಮಾತ್ರ!

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ಸೇವೆಗಾಗಿ ಸಿನಿಯರ್ ರೆಸಿಡೆನ್ಸಿ ಡಾಕ್ಟರ್, ಜೂನಿಯರ್ ರೆಸಿಡೆನ್ಸಿ ಡಾಕ್ಟರ್, ಸ್ಟಾಫ್ ನರ್ಸ್‌ ಸರಿದಂತೆ 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.

Mysore medical collage
Mysore medical collage
author img

By

Published : May 26, 2021, 1:49 AM IST

Updated : May 26, 2021, 6:00 AM IST

ಮೈಸೂರು: ಸರ್ಕಾರದ ಒಂದೇ ಒಂದು ಹುದ್ದೆಗೆ ಸಾವಿರಾರು ಅರ್ಜಿಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಅದೇ ಸರ್ಕಾರಿ ಹುದ್ದೆಯ 242 ಸ್ಥಾನಗಳಿಗೆ ಕೇವಲ‌ 27 ಮಂದಿಯಷ್ಟೇ ಅರ್ಜಿ ಹಾಕಿದ್ದಾರೆ.ಹೌದು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ಸೇವೆಗಾಗಿ ಸಿನಿಯರ್ ರೆಸಿಡೆನ್ಸಿ ಡಾಕ್ಟರ್, ಜೂನಿಯರ್ ರೆಸಿಡೆನ್ಸಿ ಡಾಕ್ಟರ್, ಸ್ಟಾಫ್ ನರ್ಸ್‌ ಸರಿದಂತೆ 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆದರೆ ಆಕಾಂಕ್ಷಿಗಳ ಪೈಕಿ 27 ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದಾರೆ.

ಕರೆದಿದ್ದು 242 ಹುದ್ದೆಗೆ ಅಪ್ಲಿಕೇಶನ್ ಬಂದಿದ್ದು 27 ಮಾತ್ರ

18 ಸಿನಿಯರ್ ರೆಸಿಡೆನ್ಸಿ ಡಾಕ್ಟರ್(ತಿಂಗಳ‌ ವೇತನ 2.50 ಲಕ್ಷ ರೂ.) ಹುದ್ದೆಗಳು, 14 ಸಿನಿಯರ್ ರೆಸಿಡೆನ್ಸಿ( ಪಲ್ಮನಾಲಜಿಸ್ಟ್) ಹುದ್ದೆಗಳು, 22 ಸಿನಿಯರ್ ರೆಸಿಡೆನ್ಸಿ(ಅನಸ್ತೇಷಿಯ) ಹುದ್ದೆಗಳು,29 ಜೂನಿಯರ್ ರೆಸಿಡೆನ್ಸಿ ಡಾಕ್ಟರ್ (1.10 ಲಕ್ಷ ರೂ.ಸಂಬಳ) ಹುದ್ದೆಗಳು, 159 ಸ್ಟಾಪ್ ನರ್ಸ್​ಗಳು (ತಿಂಗಳ‌ ವೇತನ 28ಸಾವಿರ ರೂ.) ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿತ್ತು.

ಇದನ್ನೂ ಓದಿ: 2 ವಾರದಲ್ಲಿ ಕೇಂದ್ರದಿಂದ 1420 ಟನ್ ಆಮ್ಲಜನಕ ಪೂರೈಕೆ: ಸದಾನಂದಗೌಡ

ಮೈಸೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ಮೇ 24ರಂದು ಸಂದರ್ಶನ ಏರ್ಪಡಿಸಲಾಗಿತ್ತು. 27 ಮಂದಿಯಷ್ಟೇ ಬಂದಿದ್ದರಿಂದ ಬೆಳಿಗ್ಗೆ 10.30 ರಿಂದ 11:30ರವರಿಗೆ ಸಂದರ್ಶನ ಪ್ರಕ್ರಿಯೆ ಮುಗಿಯಿತು. ನೇಮಕಾತಿ ಸಮಿತಿಯ ಉಸ್ತುವಾರಿಯನ್ನು ಮೈಸೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ(ಎಂಎಂಸಿ- ಆರ್ ಎ) ಡೀನ್ ಡಾ. ಸಿ.ಪಿ.ನಂಜರಾಜ ವಹಿಸಿದ್ದರು.

Last Updated : May 26, 2021, 6:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.