ಮೈಸೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ, ದಂಡ ವಿಧಿಸಿರುವ ಘಟನೆ ಜಿಲ್ಲೆಯ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ.
ನರಸೀಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟು ತೆರೆದು ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಅಂಗಡಿ ಮಾಲೀಕರು ನಿಯಮ ಉಲ್ಲಂಘಿಸಿ ವಹಿವಾಟು ನಡೆಸುತ್ತಿದ್ದಾರೆ.
ಪಟ್ಟಣದ ಪ್ರತಿಷ್ಠಿತ ಅಂಗಡಿಗಳಾದ ವಾಸವಿ ಹಾಲ್ ಮತ್ತು ಎಸ್ಪಿಎಸ್ ಬಟ್ಟೆ ಅಂಗಡಿಯಲ್ಲಿ ತುಂಬಿ ತುಳುಕುತ್ತಿದ್ದ ಜನತೆಗೆ ಬುದ್ಧಿ ಹೇಳಲಾಗಿದೆ. ಜೊತೆಗೆ, ಪುರಸಭೆ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಸ್ಥಳದಲ್ಲೇ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಅಂಗಡಿಗೆ ಬೀಗ ಜಡಿಯಲಾಗಿದೆ.
ಇನ್ನು ಪಟ್ಟಣದಾದ್ಯಂತ ಕಾರ್ಯಾಚರಣೆ ಜಾರಿಯಿದ್ದು, ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಪುರಸಭೆ ಆರೋಗ್ಯಾಧಿಕಾರಿ ಚೇತನ್ ಮನವಿ ಮಾಡಿದರು.