ಮೈಸೂರು: ಕೊರೊನಾ ಅಬ್ಬರ ಮತ್ತೆ ಮುಂದುವರಿದಿರುವುದರಿಂದ ಆಷಾಢ ಶುಕ್ರವಾರದಂದು ಬರುವ ಭಕ್ತರಿಗೆ ಚಾಮುಂಡೇಶ್ವರಿ ದರ್ಶನ ಪಡೆಯಲು ಪ್ರವೇಶ ನಿರಾಕರಿಸಲಾಗಿದೆ.

ಜೂ. 26ರ ಮೊದಲ ಶುಕ್ರವಾರ, ಜುಲೈ 3, 10 ಮತ್ತು 17ರ ಆಷಾಢ ಶುಕ್ರವಾರ, ಜುಲೈ 13ರ ಅಮ್ಮನವರ ಜನ್ಮೋತ್ಸವ, ಜು 14ರಂದು ಆಷಾಢ ಮಂಗಳವಾರ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ದೇವಾಲಯಗಳು ಭಕ್ತಾದಿಗಳಿಗೆ ಪ್ರವೇಶ ನೀಡದಂತೆ ಸರ್ಕಾರವೇ ಆದೇಶ ನೀಡಿತ್ತು. ಆಷಾಢ ಶುಕ್ರವಾರ ಬಂದಿರುವುದರಿಂದ ವಾರದಲ್ಲಿ ಮೂರು ದಿನ(ಶುಕ್ರವಾರ,ಶನಿವಾರ, ಭಾನುವಾರ) ಭಕ್ತಾದಿಗಳಿಗೆ ದೇವರ ದರ್ಶನ ಸಿಗುವುದಿಲ್ಲ.