ಮೈಸೂರು: ಸಾರಿಗೆ ನೌಕರರನ್ನು ಮಾತುಕತೆಗೆ ಕರೆದು ಸರ್ಕಾರ ಸಮಸ್ಯೆಯನ್ನು ಬಗೆಹರಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಲಲಿತ್ ಮಹಲ್ ಹೋಟೆಲ್ ಮುಂಭಾಗದಲ್ಲಿ ಹೆಲಿ ಟೂರಿಸಂ ಬೇಡವೇ ಬೇಡ. ಇದರಿಂದ ಮಹಲ್ ಸುತ್ತಮುತ್ತಲಿರುವ ಕಿರು ಅರಣ್ಯ ನಾಶವಾಗುವುದಲ್ಲದೇ, ಪ್ರಾಣಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದರು.
2 ದಿನಗಳಿಂದ ಮುಷ್ಕರ ನಡೆಸುತ್ತಿರುವ ರಾಜ್ಯ ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ನಡೆಸಬೇಕು. ಆ ಮೂಲಕ ಜನರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ವಾಟಾಳ್ ಎಚ್ಚರಿಸಿದರು.
ಇದೇ ವೇಳೆ ಸಿಎಂ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಮಾತನಾಡಿ, ಅದು ಅಷ್ಟು ಸುಲಭದ ಕೆಲಸವಲ್ಲ, ಅವರು ಗಟ್ಟಿಯಾಗಿ ಬೇರೂರಿದ್ದಾರೆ ಎಂದರು.
ಓದಿ: ಸಾರಿಗೆ ನೌಕರರ ಮುಷ್ಕರ ಎಫೆಕ್ಟ್: ಖಾಸಗಿ ಬಸ್ ಪ್ರಯಾಣಕ್ಕೆ ಇಲಾಖೆಯಿಂದ ದರ ನಿಗದಿ