ಮೈಸೂರು : ಲಾಕ್‌ಡೌನ್ ಪರಿಣಾಮವಾಗಿ ಕುದುರೆಗಳಿಗೆ ಮೇವು ಸಿಗದೆ ಬೀದಿಯಲ್ಲಿ ನಿದ್ರಾಣಾ ಸ್ಥಿತಿಯಲ್ಲಿ ನಿಂತಿರುವ ದೃಶ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬರುತ್ತಿದೆ. ಸಾಂಸ್ಕೃತಿಕ ನಗರಿಯು ಟಾಂಗಾ ಗಾಡಿಗಳ ನಗರಿ ಸಹ ಆಗಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಟಾಂಗಾ ಗಾಡಿಯ ಜನ ಸಂಪೂರ್ಣ ಬೀದಿಗೆ ಬಿದ್ದಿದ್ದಾರೆ.
ತಾವು ಸಾಕುತ್ತಿದ್ದ ಕುದುರೆಗಳಿಗೆ ಮೇವು ಸಿಗದೆ ಕುದುರೆಗಳನ್ನು ಬೀದಿಗೆ ಬಿಟ್ಟಿದ್ದಾರೆ. ಇದರ ಜೊತೆಗೆ ಬಿಡಾಡಿ ಕುದುರೆಗಳಿಗೂ ಮೇವು ಸಿಗದೆ ರಸ್ತೆ ಮಧ್ಯದಲ್ಲೇ ನಿಂತಿವೆ. ಈ ದೃಶ್ಯ ಮನಕಲಕುವಂತಿದೆ.