ETV Bharat / state

ಮೈಸೂರಲ್ಲಿ ಹಕ್ಕಿಜ್ವರ ಇಲ್ಲ: ಕೋಳಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್​​ - ಮೈಸೂರಲ್ಲಿ ಹಕ್ಕಿಜ್ವರ ಭೀತಿ

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ನಡುವೆ ಹಲವೆಡೆ ಹಕ್ಕಿಜ್ವರದ ಭೀತಿಯೂ ಎದುರಾಗಿತ್ತು. ಇದಕ್ಕೆ ಸಂಬಂಧಿಸಿದ್ದಂತೆ ಮೈಸೂರಿನಲ್ಲೂ ಹಕ್ಕಿಗಳು ಈ ಮೊದಲು ಅನುಮಾನಾಸ್ಪದವಾಗಿ ಸಾವನಪ್ಪಿದ್ದವು. ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಲಾಗಿತ್ತು.

No Birdfllu reporteted in Mysore: Green signal for poultry sale
ಮೈಸೂರಲ್ಲಿ ಹಕ್ಕಿಜ್ವರ ಇಲ್ಲ: ಕೋಳಿಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್​​
author img

By

Published : Apr 2, 2020, 8:59 PM IST

ಮೈಸೂರು: ನಗರದಲ್ಲಿ ಹಕ್ಕಿಜ್ವರ ಇಲ್ಲ. ಆದ್ದರಿಂದ ಇನ್ಮುಂದೆ ವಾರದಲ್ಲಿ 3 ದಿನ ಕೋಳಿ ಮಾಂಸ ಮಾರಾಟ ಮಾಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಲಾಗಿತ್ತು. ಆದರೆ ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ ಪರಿಶೀಲನೆ ನಡೆಸಿ, ಯಾವುದೇ ಹಕ್ಕಿಗಳು ಸಾವನ್ನಪ್ಪಿಲ್ಲ. ಹಕ್ಕಿಜ್ವರ ಸಂಪೂರ್ಣ ಗುಣಮುಖವಾಗಿದೆ ಎಂದು ವರದಿ ನೀಡಿತ್ತು.

No Birdfllu reporteted in Mysore: Green signal for poultry sale
ಮೈಸೂರಲ್ಲಿ ಹಕ್ಕಿಜ್ವರ ಇಲ್ಲ: ಕೋಳಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್​​

ಈ ವರದಿ ಅನ್ವಯ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗ್ಡೆ ವಾರದ ಮಂಗಳವಾರ, ಶುಕ್ರವಾರ, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ಮಾರಟ ಮಾಡಲು ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.