ETV Bharat / state

ಎನ್ಐಎ ದಾಳಿ ರಾಜಕೀಯ ಪ್ರೇರಿತ: ಅಬ್ದುಲ್ ಮಜೀದ್ ಆರೋಪ - pfi raids news

ಎನ್​ಐಎ ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ಆರ್​​ಎಸ್​​ಎಸ್ ಕೈವಾಡವಿದೆ. ಜೊತೆಗೆ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ಸರ್ಕಾರಿ ಎಜೆನ್ಸಿಗಳನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

Abdul Majeed
ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ
author img

By

Published : Sep 22, 2022, 7:24 PM IST

Updated : Sep 22, 2022, 7:36 PM IST

ಮೈಸೂರು: ದೇಶಾದ್ಯಂತ ಎನ್​ಐಎ ಪಿಎಫ್ಐ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದೆ. ದಕ್ಷಿಣ ಕನ್ನಡ ಮತ್ತು ಮಂಗಳೂರಿನಲ್ಲಿಯೂ ಎಸ್​ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ರಾಜಕೀಯ ಪ್ರೇರಿತ ಎಂದು ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ ಮಾಡಿದ್ದಾರೆ.

ಇಂದು ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಅವರು, ಈ ದಾಳಿ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ಆರ್​​ಎಸ್​​ಎಸ್ ಕೈವಾಡವಿದೆ. ಜೊತೆಗೆ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ಸರ್ಕಾರಿ ಎಜೆನ್ಸಿಗಳನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ದಾಳಿ ನಡೆಸುತ್ತಿದೆ. ಜೊತೆಗೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಪ್ರತಿಪಕ್ಷಗಳ ವಿರುದ್ಧವೂ ಸಹಾ ಈ ರೀತಿಯ ಸಂಚು ನಡೆದಿದೆ ಎಂದು ಅವರು ಆರೋಪಿಸಿದರು.

ಮಂಗಳೂರಿನ ಎಸ್​ಡಿಪಿಐ ಕಚೇರಿಯ ಬಾಗಿಲನ್ನು ಮುರಿದಿದ್ದು ಸರಿಯಲ್ಲ. ಅದನ್ನು ಖಂಡಿಸುತ್ತೇವೆ. ಅದೊಂದು ಸಾರ್ವಜನಿಕರಿಗೆ ಮುಕ್ತಕಾದ ಕಚೇರಿ. ಇದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈ ರೀತಿ ಕಚೇರಿಯ ಮೇಲೆ ದಾಳಿ ಮಾಡುವ ಮುನ್ನ ಒಂದು ನೋಟಿಸ್ ಆದರೂ ನೀಡಬೇಕಿತ್ತು. ಆಗ ನಾವೇ ಮುಕ್ತವಾಗಿ ಶೋಧನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದೆವು. ಇದೊಂದು ಷಡ್ಯಂತ್ರದ ಭಾಗ ಎಂದು ಅಬ್ದುಲ್ ಮಜೀದ್ ಕಿಡಿಕಾರಿದರು.

ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ

ಇದನ್ನೂ ಓದಿ: ಬಂಧಿತರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಿ: ಹೋರಾಟದ ಎಚ್ಚರಿಕೆ ನೀಡಿದ ಎಸ್​ಡಿಪಿಐ

ಎಸ್​ಡಿಪಿಐ ಬ್ಯಾನ್ ಮಾಡುವ ಬಗ್ಗೆ ಯೋಚನೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ ಮಜೀದ್, ಇದನ್ನು ನಿಷೇಧಿಸುವ ಬದಲು ಆರ್​ಎಸ್​​ಎಸ್ ಬ್ಯಾನ್ ಮಾಡಬೇಕು. ಬಾಬ್ರಿ ಮಸೀದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮುಂತಾದ ಪ್ರಕರಣಗಳು ನಡೆದಿದ್ದು, ಇವರ ಕುಮ್ಮಕ್ಕಿನಿಂದಲೇ. ಮೊದಲು ಬಿಜೆಪಿ ಅವರು ಮಾಡುತ್ತಿರುವ ಆರೋಪಗಳು ಇಲ್ಲಿಯವರೆಗೆ ಎಸ್​ಡಿಪಿಐ ಮೇಲೆ ಸಾಬೀತಾಗಿಲ್ಲ. ನಮ್ಮನ್ನು ದಾಳಿಯ ಮೂಲಕ ಟಾರ್ಗೆಟ್ ಮಾಡಿ ಎದುರಿಸುವ ಪ್ರಯತ್ನ ನಡೆಸಲಾಗುತ್ತಿದೆ. ನಾವು ಕಾನೂನು ಮೂಲಕವೇ ಉತ್ತರ ನೀಡುತ್ತೇವೆ ಎಂದು ಹೇಳಿದರು.

Last Updated : Sep 22, 2022, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.