ETV Bharat / state

ಅಡಿಪಾಯವಿಲ್ಲದೆ ಮನೆ ನಿರ್ಮಿಸುವ ತಂತ್ರಜ್ಞಾನ ಪರಿಚಯಿಸಿದ ಮೈಸೂರಿನ ಆರ್ಕಿಟೆಕ್ಟ್‌

author img

By

Published : Jan 12, 2022, 5:07 PM IST

Updated : Jan 12, 2022, 5:34 PM IST

ಅಡಿಪಾಯವಿಲ್ಲದೆ ನೆಲ ಮಹಡಿ, ಒಂದನೇ ಅಂತಸ್ತು ಮತ್ತು ಎರಡನೇ ಅಂತಸ್ತು ಕಟ್ಟಬಹುದಂತೆ. ಕಾಂಕ್ರಿಟ್ ಬಳಸಿ ಇಂಥ ಮನೆ ಕಟ್ಟುವುದರಿಂದ 75 ರಿಂದ 100 ವರ್ಷಗಳವರೆಗೆ ಕಟ್ಟಡ ಗಟ್ಟಿಮುಟ್ಟಾಗಿರುತ್ತದೆ ಎಂದು ಆರ್ಕಿಟೆಕ್ಟ್ ಶರತ್ ಕುಮಾರ್ ಹೇಳುತ್ತಾರೆ.

ಅಡಿಪಾಯವಿಲ್ಲದೆ ಮನೆ ಕಟ್ಟುವ ನೂತನ ತಂತ್ರಜ್ಞಾನ

ಮೈಸೂರು: ಮನೆ ಕಟ್ಟಬೇಕು ಎಂದರೆ ಮೊದಲು ಗಟ್ಟಿಯಾಗಿ ಅಡಿಪಾಯ ಹಾಕುವುದು ಸಾಮಾನ್ಯ. ಆದರೆ ಮೈಸೂರಿನ ಆರ್ಕಿಟೆಕ್ಟ್ ಒಬ್ಬರು ಅಡಿಪಾಯವಿಲ್ಲದೆ ಸುಭದ್ರವಾಗಿ‌ ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಮನೆ ಕಟ್ಟಿ ತೋರಿಸಿದ್ದಾರೆ. ಈ ವಿನೂತನ ಅವಿಷ್ಕಾರವನ್ನು ಆರ್ಕಿಟೆಕ್ಟ್ ಶರತ್ ಕುಮಾರ್ ಈಟಿವಿ ಭಾರತ್‌ಗೆ ವಿವರಿಸಿದರು.

ಅಡಿಪಾಯವಿಲ್ಲದೆ ಮನೆ ನಿರ್ಮಿಸುವ ತಂತ್ರಜ್ಞಾನ ಪರಿಚಯಿಸಿದ ಮೈಸೂರಿನ ಆರ್ಕಿಟೆಕ್ಟ್‌

ಸಾಮಾನ್ಯವಾಗಿ ಮನೆ ನಿರ್ಮಾಣಕ್ಕೆ ಅಂದಾಜು 5ರಿಂದ 6 ಅಡಿ ಆಳ ಅಗೆದು ಅಡಿಪಾಯ ಹಾಕುತ್ತಾರೆ. ಆದರೆ ನಾವು ಹೊಸ ರೀತಿಯಲ್ಲಿ ಅಡಿಪಾಯವಿಲ್ಲದೆ ಮನೆ ಕಟ್ಟಲು ಮೂರು ವಿಧಾನಗಳನ್ನು ಬಳಸುತ್ತೇವೆ. ಮೊದಲನೆಯದು ಫೈಲ್ ಫೌಂಡೇಶನ್, ಇಲ್ಲಿ ಟ್ರಾಕ್ಟರ್ ಮೂಲಕ 7 ಅಡಿ ಭೂಮಿ ಕೊರೆದು ಪಿಲ್ಲರ್ ಅಳವಡಿಸುತ್ತೇವೆ. ಎರಡನೆಯದ್ದು ಫ್ಲೀಟ್ ಭೀಮ್ ಮತ್ತು ಮೂರನೇಯದ್ದು ಸ್ಲ್ಯಾಬ್ ಆನ್ ಗ್ರೇಡ್ ಎಂಬ ವಿಧಾನಗಳನ್ನು ಬಳಸಿ ಮನೆ ಕಟ್ಟುತ್ತೇವೆ.

ಈ ರೀತಿಯಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಭೂಮಿಯನ್ನು ಅಗೆಯುವ ಅವಶ್ಯಕತೆ ಇಲ್ಲ. ಇದ್ರ ಜೊತೆಗೆ ಸಹಜವಾಗಿ ಮನೆ ನಿರ್ಮಾಣ ಮಾಡಲು ಬೇಕಾಗುವಷ್ಟು ಕೆಲಸಗಾರರೂ ಬೇಕಾಗುವುದಿಲ್ಲ. ಇದರಿಂದ ಮನೆ ಕಟ್ಟುವವರಿಗೆ ಶೇ 30 ರಿಂದ 40ರಷ್ಟು ಕಡಿಮೆ ಖರ್ಚಾಗುತ್ತದೆ. ಉಳಿದ ದುಡ್ಡನ್ನು ಮನೆಯ ಬೇರೆ ಕೆಲಸಕ್ಕೆ ಬಳಸಬಹುದು. ಸಾಮಾನ್ಯ ಮನೆ ಕಟ್ಟುವ ದುಡ್ಡಿನಲ್ಲಿ ಶೇ 30 ರಿಂದ 40ರಷ್ಟು ದುಡ್ಡು ಅಡಿಪಾಯಕ್ಕೆ ಬೇಕಾಗುತ್ತದೆ. ಆದರೆ ಅಡಿಪಾಯವಿಲ್ಲದೆ ಹೊಸ ತಂತ್ರಜ್ಞಾನದಿಂದ ಕಡಿಮೆ ಬಜೆಟ್‌ನಲ್ಲಿ ಮನೆ ನಿರ್ಮಾಣ ಮಾಡಬಹುದು.

ಈ ಅಡಿಪಾಯವಿಲ್ಲದ ಮನೆ ನಿರ್ಮಾಣಕ್ಕೆ 'ಅಡ್ವಾನ್ಸ್ ರ್ಯಾಪಿಡ್ ಕನ್ ಸ್ಟ್ರಕ್ಷನ್' ಎಂದು ಇವರು ಹೆಸರಿಟ್ಟಿದ್ದಾರೆ. ಅಡಿಪಾಯವಿಲ್ಲದೆ ನೆಲಮಹಡಿ, ಒಂದನೇ ಅಂತಸ್ತು ಮತ್ತು ಎರಡನೇ ಅಂತಸ್ತು ಕಟ್ಟಬಹುದು. ನಿರ್ಮಾಣ ಕಾರ್ಯಕ್ಕೆ ಹೆಚ್ಚಾಗಿ ಕಾಂಕ್ರಿಟ್ ಬಳಸುವುದರಿಂದ ಕಟ್ಟಡ 75 ರಿಂದ 100 ವರ್ಷಗಳವರೆಗೆ ಗಟ್ಟಿಮುಟ್ಟಾಗಿ ಇರುತ್ತದೆ ಎಂದು ಶರತ್‌ ಕುಮಾರ್‌ ವಿವರಿಸಿದರು.

ಆರ್ಕಿಟೆಕ್ಟ್ ಶರತ್ ಕುಮಾರ್ ಮೊದಲು 2 ವರ್ಷ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡಿದ್ದು, ಅಲ್ಲಿಯ ತಂತ್ರಜ್ಞಾನವನ್ನು ತಿಳಿದು ಹೊಸ ರೀತಿಯ ಅಡಿಪಾಯವಿಲ್ಲದೆ ಮನೆ ನಿರ್ಮಾಣ ಮಾಡಿದ್ದಾರೆ‌. ಈ ತಂತ್ರಜ್ಞಾನ ಬಳಸಿ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ಒಂದು ಡೈರಿ ಕಟ್ಟಡ ನಿರ್ಮಾಣ ಮಾಡಿ ಅದು ಯಶಸ್ವಿಯಾದ ನಂತರ ಮೈಸೂರಿನ ಬಂಡಿಪಾಳ್ಯ ಬಳಿ ಮನೆ ನಿರ್ಮಾಣ ಮಾಡಿದ್ದಾರೆ.

ಸಾಮಾನ್ಯವಾಗಿ ಮನೆ ಕಟ್ಟಲು 6 ರಿಂದ 7 ತಿಂಗಳು ಬೇಕಾಗುತ್ತದೆ. ಆದರೆ ಅಡಿಪಾಯವಿಲ್ಲದ ಮನೆಯನ್ನು ಕಟ್ಟಲು 3 ತಿಂಗಳು ಸಾಕು. ಜೊತೆಗೆ ಹೆಚ್ಚು ಕೆಲಸಗಾರರು ಕೂಡಾ ಬೇಡ. ಪ್ರಸ್ತುತ ಮನೆ ಕಟ್ಟುವ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಆದರೆ ಇಲ್ಲಿ ಸಾಮಾನ್ಯ ಮನೆಗಳಿಗೆ ಬೇಕಾಗುವಷ್ಟು ಸಾಮಗ್ರಿಗಳು ಬೇಕಿಲ್ಲ. ಇದರಿಂದಾಗಿ ಕಡಿಮೆ ಬಜೆಟ್‌ನಲ್ಲಿ ತಮ್ಮ ಕನಸಿನ ಮನೆ ನಿರ್ಮಾಣ ಮಾಡಬಹುದು ಎಂದು ಆರ್ಕಿಟೆಕ್ಟ್ ಶರತ್ ಕುಮಾರ್ ತಿಳಿಸಿದರು.

Last Updated : Jan 12, 2022, 5:34 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.