ಮೈಸೂರು : ಪ್ರಾಣಿ ವಿನಿಮಯ ಯೋಜನೆಯಡಿ ಸಿಂಗಾಪುರ ಮೃಗಾಲಯದಿಂದ 1 ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ನ ಮೃಗಾಲಯದಿಂದ ಭಾರತೀಯ ಸಿಂಹಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದೆ.
ಮೃಗಾಲಯದಲ್ಲಿ ಇರುವ ಒಂಟಿ ಪ್ರಾಣಿಗಳ ಜೊತೆಗೂಡುವಿಕೆ ಹಾಗೂ ಅನುಮೋದಿತ ಪ್ರಾಣಿ ಸಂಗ್ರಹ ಯೋಜನೆಗಳನ್ನು ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಾಪುರದ ಮೃಗಾಲಯದಿಂದ 14 ವರ್ಷದ ರಾ ಎಂಬ ಹೆಸರಿನ ಹೆಣ್ಣು ಚಿಂಪಾಂಜಿ ತರಲಾಗಿದ್ದು ಇದಕ್ಕೆ ಬದಲಾಗಿ ರಾಣಿ ಎಂಬ ಹೆಸರಿನ ಹೆಣ್ಣು ಸ್ಲಾತ್ ಕರಡಿಯನ್ನು ಸಿಂಗಾಪುರಕ್ಕೆ ವಿಮಾನದ ಮೂಲಕ ಕಳಿಸಲಾಗಿದೆ.
ಜೊತೆಗೆ ಗುಜರಾತ್ನ ಸಕ್ಕರ್ ಬಾಗ್ ಮೃಗಾಲಯದಿಂದ 2 ಜೊತೆ ಭಾರತೀಯ ಸಿಂಹಗಳನ್ನು ತರಲಾಗಿದ್ದು 1 ಜೊತೆ ಮೈಸೂರು ಮೃಗಾಲಯಕ್ಕೆ, ಮತ್ತೊಂದು ಜೊತೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೀಡಲಾಗಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.