ETV Bharat / state

ಶರನ್ನವರಾತ್ರಿ ಸಂಭ್ರಮ: ಕಾಳಿ ಅವತಾರ ತಾಳಿದ ಚಾಮುಂಡೇಶ್ವರಿ

ನಾಡ ಅಧಿದೇವತೆ ಚಾಮುಂಡೇಶ್ವರಿಯ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಕಾಳಿಯ ಅಲಂಕಾರವನ್ನು ಮಾಡಲಾಗಿತ್ತು. ಅದೇ ರೀತಿ ಅರಮನೆಯಲ್ಲೂ ಕಾಳರಾತ್ರಿ ಪೂಜೆ ಮಾಡಲಾಗಿದೆ.

Chamundshwari temple
ಚಾಮುಂಡೇಶ್ವರಿ
author img

By

Published : Oct 24, 2020, 10:02 AM IST

ಮೈಸೂರು: ಶರನ್ನವರಾತ್ರಿಯ 7ನೇ ದಿನವಾದ ನಿನ್ನೆ ರಾಕ್ಷಸರನ್ನು ಸಂಹಾರ ಮಾಡಿದ ದಿನ. ಹಾಗಾಗಿ ಚಾಮುಂಡೇಶ್ವರಿಗೆ ಕಾಳಿಯ ಅಲಂಕಾರ ಮಾಡಲಾಗಿತ್ತು.

ಚಾಮುಂಡೇಶ್ವರಿಗೆ ಕಾಳಿಯ ಅಲಂಕಾರ

ನಾಡ ಅಧಿದೇವತೆ ಚಾಮುಂಡೇಶ್ವರಿಯ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಕಾಳಿಯ ಅಲಂಕಾರ ಮಾಡಲಾಗಿದ್ದು, ವರ್ಷದಲ್ಲಿ ನವರಾತ್ರಿ ಸಂದರ್ಭದಲ್ಲಿ 7ನೇ ದಿನ ಕಾಳರಾತ್ರಿ ಪೂಜೆಯ ದಿನದಂದು ಮಾತ್ರ ಈ ಅಲಂಕಾರ ಮಾಡಲಾಗುತ್ತದೆ. ಈ ಕಾಳರಾತ್ರಿ ಪೂಜೆಯಂದು ಚಾಮುಂಡಿ ತಾಯಿಯ ಕಾಳಿ ಅಲಂಕಾರ ನೋಡಲು ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಕೋವಿಡ್​ಅನ್ನು ನಿರ್ಲಕ್ಷ್ಯಿಸಿ ಬಂದಿದ್ದು, ಈ ಜನಸಾಗರವನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಟ್ಟರು.

ಅರಮನೆಯಲ್ಲೂ ಕಾಳರಾತ್ರಿ ಪೂಜೆ

ಶರನ್ನವರಾತ್ರಿಯ 7ನೇ ದಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಳರಾತ್ರಿ ಪೂಜೆ ನೆರವೇರಿಸಿದರು. ಅರಮನೆಯಲ್ಲಿ ಪ್ರಾಣಿ ರೂಪದ 2 ಗೊಂಬೆಗಳನ್ನು ಮಾಡಿ ಬಲಿ ಕೊಟ್ಟ ರೀತಿಯಲ್ಲಿ ಪೂಜಿಸುವುದು ಈ ಕಾಳರಾತ್ರಿ ಪೂಜೆಯ ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.