ETV Bharat / state

ಕಲೆ ಮಾರಾಟದ ಸರಕು: ನಾಗತಿಹಳ್ಳಿ‌ ಚಂದ್ರಶೇಖರ್ - Etv Bharat Kannada

ಅಮೃತ ವಿಶ್ವ ವಿದ್ಯಾಪೀಠಂನಲ್ಲಿ ನಡೆದ ರಾಷ್ಟ್ರಮಟ್ಟದ ಕಿರುಚಿತ್ರ ಹಬ್ಬ ಸಿನೆರಮಾ ಕಾರ್ಯಕ್ರಮವನ್ನು ನಿರ್ದೇಶಕ ಮತ್ತು ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು.

film fest
ಸಿನೆರಮಾ ಕಾರ್ಯಕ್ರಮ
author img

By

Published : Mar 11, 2023, 7:44 AM IST

ಮೈಸೂರು: ‌ಇಂದಿನ ಮಾರ್ಕೆಟಿಂಗ್ ಯುಗದಲ್ಲಿ ಕಲೆ ಕೂಡ ಮಾರಾಟದ ಸರಕಾಗಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರ ಹಬ್ಬ ಸಿನೆರಮಾ’ ಕಾರ್ಯಕ್ರಮವನ್ನು ಕ್ಲ್ಯಾಪ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಲೆಯ ಜೀವನದಲ್ಲಿ ಜಗತ್ತಿನೊಂದಿಗೆ ಸ್ಪರ್ಧಿಸಬೇಕಾದ ಅಗತ್ಯವಿದೆ. ಸಾಕಷ್ಟು ಜಾಗತಿಕ ಸವಾಲುಗಳು ಇವೆ. ಇದನ್ನೆಲ್ಲ ಒಪ್ಪಿಕೊಂಡು ನಾವು ಏನನ್ನು ಸೃಷ್ಟಿಸಬೇಕು ಎಂಬುದನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕು. ಈ ಮಾರಾಟದ ವೇಗದಲ್ಲಿ ಸೃಷ್ಟಿ ಕ್ರಿಯೆ ಮತ್ತು ಜನರಿಗೆ ಏನನ್ನು ತಲುಪಿಸಬಹುದು, ಹೇಗೆ ಅರ್ಥ ಮಾಡಿಸಬಹುದು ಎಂಬುದನ್ನು ಯೋಚಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಿನಿಮಾ ಮಾಡಲು ಹಣಬೇಕು. ಅದಕ್ಕಿಂತಲೂ ಹೆಚ್ಚು ಸಿನಿಮಾ ಮಾಡುವ ಹುಚ್ಚು, ಉತ್ಸಾಹವಿರಬೇಕು. ಅದರೊಟ್ಟಿಗೆ ಸಾಮಾಜಿಕ ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು. ದೃಶ್ಯ ಮಾಧ್ಯಮವಾಗಿರುವ ಸಿನಿಮಾ ಎಂಬುದು ಪರಿಣಾಮಕಾರಿಯಾದದ್ದು. ಇತ್ತೀಚಿನ ದಿನಗಳಲ್ಲಿ ಜನರು ನೋಡುಗರಾಗುತ್ತಿದ್ದಾರೆ. ಓದುವ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸಿನಿಮಾ ಮಾಡುವ ಉತ್ಸಾಹವಿರುವವರು, ಹೆಚ್ಚು ಸಾಹಿತ್ಯವನ್ನು ಓದಿಕೊಳ್ಳಬೇಕು, ರಂಗಭೂಮಿಯ ಚಟುವಟಿಕೆಗಳ ಬಗ್ಗೆ ಅರಿವು ಇರಬೇಕು. ಆಗ ಸಿನಿಮಾ ಕ್ಷೇತ್ರದಲ್ಲಿ ಪೂರಕವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಲು ಸುಲಭವಾಗಲಿದೆ ಎಂದು ಹಿರಿಯ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ನಟ ಮಂಡ್ಯ ರಮೇಶ್, ನಿರ್ದೇಶಕರಾಗಲು ಬಯಸುವವರಿಗೆ ಸಾಹಿತ್ಯ ಪ್ರಜ್ಞೆ ಇರಬೇಕು. ವಿಷಯಗಳಲ್ಲಿ ಪ್ರತಿನಿತ್ಯ ಅಪ್ಡೇಟ್ ಆಗಬೇಕು. ಕುತೂಹಲಿಯಾಗಿರಬೇಕು, ಹಠದ ಮೇಲೆ ಕೆಲಸ ಮಾಡಬೇಕು. ಸೂಕ್ಷ್ಮತೆ ಇರಬೇಕು. ಚಳವಳಿ, ಸಾಹಿತ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಜಾತ್ಯತೀತ ಮನೋಭಾವ ಹೊಂದಿರಬೇಕು, ನಿರಂತರ ಅಧ್ಯಯನ ಶೀಲರಾಗಿರಬೇಕು ಎಂದು ಸಲಹೆ ನೀಡಿದರು. ಸಿನಿಮಾ ನಟರು ಜಿಮ್​ನಲ್ಲಿ ಹುಟ್ಟುವುದಿಲ್ಲ, ನಟಿಯರು ಬ್ಯೂಟಿ ಪಾರ್ಲರ್​ನಲ್ಲಿಯೂ ಸೃಷ್ಟಿಯಾಗುವುದಿಲ್ಲ. ಸಂತೆ, ಜಾತ್ರೆ, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಅವರು ಸಿಗಬಹುದು. ಸೂಕ್ಷ್ಮತೆ ಮತ್ತು ಗ್ರಹಿಕೆಯ ಮನೋಭಾವದಿಂದ ನಟ-ನಟಿಯರು ಹುಟ್ಟುತ್ತಾರೆ. ಯಾವುದೇ ಕೆಲಸದಲ್ಲಿ ಶ್ರದ್ಧೆ, ಮನಸ್ಸಿಟ್ಟು ಕೆಲಸ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ನೀವು ಇಂದು ಮಾಡುವ ಕಿರುಚಿತ್ರ, ಮುಂದೆ ಮಾಡಬಹುದಾದ ಸಿನಿಮಾದ ಐಡೆಂಟಿಟಿ ಕಾರ್ಡ್ ಆಗಿರುತ್ತದೆ. ಹಾಗಾಗಿ, ಕಿರುಚಿತ್ರ ಮಾಡುವಾಗಲೂ ಶ್ರಮ, ಶ್ರದ್ಧೆ ಇರಬೇಕು. ಸಿನಿಮಾ ಕೌಶಲ ಮತ್ತು ಕಂಟೆಂಟ್ ಎರಡೂ ಒಟ್ಟಿಗೆ ಸೇರಿ ಅದಕ್ಕೆ ಒಳ್ಳೆಯ ಮಾರುಕಟ್ಟೆ ಅವಕಾಶ ಸಿಕ್ಕರೆ ಗೆಲುವು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ದರಿರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಮೃತ ಸಿಂಚನ’ ಕ್ಯಾಂಪಸ್ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಚಿತ್ರಕಥೆ ಬರವಣಿಗೆ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್​ ವಿಶೇಷ ಉಪನ್ಯಾಸ ನೀಡಿದರು. ಫಿಲ್ಮ್​ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಬಗ್ಗೆ ಡಾ.ಸಂಗೀತಾ ಜನಚಂದ್ರನ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ನಿರ್ದೇಶಕ ಅನಂತಾನಂದ ಚೈತನ್ಯ, ಪ್ರಾಂಶುಪಾಲ ಡಾ. ಜಿ. ರವೀಂದ್ರನಾಥ್, ಅಕಾಡೆಮಿಕ್ ಡೀನ್ ಡಾ. ರೇಖಾ ಭಟ್, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಮೌಲ್ಯ ಮತ್ತಿತರರಿದ್ದರು.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ 5ನೇ ಸೀಸನ್: ಸಾಧಕರ ಸೀಟ್​ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.