ETV Bharat / state

ಅಕ್ಕ.. ಅಕ್ಕ ಅಂತಾ ಮನೆಗೆ ಬರ್ತಿದ್ದವನಿಂದ ನೀಚ ಕೃತ್ಯ.. ಮಹಿಳೆಯ ಖಾಸಗಿ ವಿಡಿಯೋ ಸೆರೆಹಿಡಿದು ಬ್ಲ್ಯಾಕ್​ಮೇಲ್!

ಸ್ನಾನ ಮಾಡುವ ವಿಡಿಯೋ ತೆಗೆದು ಬ್ಲ್ಯಾಕ್​ಮೇಲ್​.. ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ- ನೊಂದ ಮಹಿಳೆ ಆರೋಪ

ಮಹಿಳೆಯ ಖಾಸಗಿ ವಿಡಿಯೋ ಸೆರೆಹಿಡಿದು ಬ್ಲ್ಯಾಕ್​ಮೇಲ್!

author img

By

Published : Jul 21, 2022, 4:27 PM IST

Updated : Jul 21, 2022, 5:00 PM IST

ಮೈಸೂರು: ತಾನು ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನೋರ್ವ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದು, ಈ ಯುವಕನನ್ನು ಬಂಧಿಸುವಂತೆ ನೊಂದ ಮಹಿಳೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದೂ 'ಈಟಿವಿ ಭಾರತ'ಕ್ಕೆ ಸಂತ್ರಸ್ತೆ ತಿಳಿಸಿದ್ದಾರೆ.

ನಗರದ ನಿವಾಸಿಯಾದ ಈ ಮಹಿಳೆಯು 'ಈಟಿವಿ ಭಾರತ' ಜೊತೆ ಮಾತನಾಡಿ, ನಾನು ಸ್ನಾನ ಮಾಡುವ ವಿಡಿಯೋವನ್ನು ಪ್ರಮೋದ್ ಎಂಬ ಯುವಕ ತೆಗೆದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಎಲ್ಲ ರೀತಿಯಲ್ಲೂ ಬ್ಲ್ಯಾಕ್​ಮೇಲ್​ ಮಾಡಿದ್ದ. ಈ ವಿಚಾರ ನನ್ನ ಗಂಡನಿಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದೆ. ಆದರೆ, ಒಂದು ತಿಂಗಳ ಹಿಂದೆ ವಿಪರೀತ ಕಾಟ ಕೊಡಲು​ ಶುರು ಮಾಡಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಮುಂದಿನ ಮನೆಯವನಾದ ಈ ಆರೋಪಿಯು ನನ್ನ ಗಂಡನ ಸ್ನೇಹಿತನಾಗಿದ್ದು, ಅಕ್ಕ.. ಅಕ್ಕ.. ಎಂದು ಹೇಳಿಕೊಂಡು ಮನೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ನಾನು ಸ್ನಾನ ಮಾಡುವುದನ್ನು ಗುಪ್ತವಾಗಿ ವಿಡಿಯೋವನ್ನು ತೆಗೆದಿದ್ದಾನೆ. ಅಲ್ಲದೇ, ಬ್ಲ್ಯಾಕ್​ಮೇಲ್ ಮಾಡುತ್ತಿರುವ ಬಗ್ಗೆ ಮೈಸೂರಿನ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಯುವತಿ ಕುಟುಂಬಸ್ಥರು

Last Updated : Jul 21, 2022, 5:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.