ETV Bharat / state

ಮುಂದಿನ ವಾರದಿಂದ ಮತ್ತೆ ವಾಹನಗಳ ತಪಾಸಣೆ: ಡಿಸಿಪಿ ಗೀತಾ ಪ್ರಸನ್ನ - ಮೈಸೂರಿನಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರ

ಸ್ವಯಂ ಪ್ರೇರಿತರಾಗಿ ದಂಡ ಪಾವತಿಸಿ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಾಹನಗಳ ಮೇಲಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಸಲುವಾಗಿ ಮೈಸೂರಿನಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕುರಿತು ಡಿಸಿಪಿ ಮಾಹಿತಿ ನೀಡಿದರು.

Mysuru DCP informed about self-inspection centers
ಡಿಸಿಪಿ ಗೀತಾ ಪ್ರಸನ್ನ
author img

By

Published : Apr 6, 2021, 10:26 PM IST

ಮೈಸೂರು : ಜನಸ್ನೇಹಿ ಸಂಚಾರ ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಅಂತವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ ಬರುತ್ತಿದೆ. ಆದ್ದರಿಂದ ಮುಂದಿನ ವಾರದಿಂದ ಸಂಚಾರಿ ಪೊಲೀಸರು ವಾಹನಗಳ ತಪಾಸಣೆಗೆ ಇಳಿಯಲಿದ್ದಾರೆ ಎಂದು ಡಿಸಿಪಿ ಗೀತಾ ಪ್ರಸನ್ನ ಎಚ್ಚರಿಕೆ ಕೊಟ್ಟಿದ್ದಾರೆ‌.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ಬೈಕ್ ಸವಾರರು ಹೆಲ್ಮೆಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್, ಮೊಬೈಲ್ ಬಳಕೆ, ಓವರ್ ಸ್ಪೀಡ್ ಕಂಡು ಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕಳೆದ 15 ದಿನಗಳಿಂದ ಯಾವುದೇ ಪ್ರಕರಣಗಳನ್ನು ದಾಖಲು ಮಾಡುತ್ತಿಲ್ಲ. ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆ ಮುಂದಿನ ವಾರದಿಂದ ಮತ್ತೆ ತಪಾಸಣೆ ಆರಂಭಿಸುತ್ತೇವೆ. ಪ್ರತಿ ಠಾಣೆಯ ಓರ್ವ ಇನ್ಸ್​ಪೆಕ್ಟರ್​, ಇಬ್ಬರು ಪಿಎಸ್ಐಗಳು ವಾಹನ ದಟ್ಟಣೆ ಇರುವ ಭಾಗಗಳಲ್ಲಿ ತಪಾಸಣೆ ಮಾಡಲಿದ್ದಾರೆ ಎಂದರು.

ಡಿಸಿಪಿ ಗೀತಾ ಪ್ರಸನ್ನ

ತಪಾಸಣೆ ವೇಳೆ ಯಾವುದೇ ದಾಖಲಾತಿ ನೋಡಿ ಕೇಸ್ ದಾಖಲಿಸಲ್ಲ, ಬದಲಿಗೆ ಓವರ್ ಸ್ಪೀಡ್, ಹೆಲ್ಮೆಟ್ ಇಲ್ಲದೆ ಸಂಚಾರ, ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಒನ್ ವೇ ಸಂಚಾರ ಇವೆಲ್ಲವನ್ನು ನೋಡಿ ಪ್ರಕರಣ ದಾಖಲು ಮಾಡಲಾಗುತ್ತದೆ. ಹೊಸ ಸಿಗ್ನಲ್ ಮಾಡುವ ಚಿಂತನೆ ಇದೆ. ಹೊಸದಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಸಲುವಾಗಿ ಪಾಲಿಕೆಗೆ ಪ್ರಸ್ತಾವ ಕಳುಹಿಸಿದ್ದೇವೆ. ನಗರೋತ್ಥಾನ ಯೋಜನೆಯಡಿ ಮಹಾನಗರ ಪಾಲಿಕೆಯಿಂದ ಈ ಕಾರ್ಯವಾಗಲಿದೆ ಎಂದು ಹೇಳಿದರು. ಜನಸ್ನೇಹಿ ಸಂಚಾರಿ ಪೊಲೀಸರ ಕಾರ್ಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ಮಾರ್ಗಸೂಚಿಯೊಂದಿಗೆ ಬಾಕಿ ದಂಡ ಪಾವತಿಗೆ ನಿಂತ ಸಂಚಾರ ಪೊಲೀಸರಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಮೈಸೂರಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ತಪಾಸಣಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬಹುದಾಗಿದೆ. ನಗರದ 10 ಕೇಂದ್ರಗಳಲ್ಲಿ 2,80,600 ರೂ. ದಂಡ ಸಂಗ್ರಹವಾಗಿದೆ. ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳಲ್ಲಿ 448 ಪ್ರಕರಣ ಮುಕ್ತಾಯವಾಗಿವೆ ಎಂದರು.

ಓದಿ : ಚಾಮರಾಜನಗರದಲ್ಲಿ ಒಂದು ದಿನ ಮೊದಲೇ ಮುಷ್ಕರದ ಬಿಸಿ.. ರಸ್ತೆಗಿಳಿಯಲಿಲ್ಲ 120 ಬಸ್!!

ಮೊದಲ ದಿನ 59,700 ರೂ. ದಂಡ ಸಂಗ್ರಹವಾಗಿ 78 ಪ್ರಕರಣ, ಎರಡನೇ ದಿನ 63,800 ದಂಡ ಸಂಗ್ರಹ, 104 ಪ್ರಕರಣ, ಮೂರನೇ ದಿನ 58,400 ದಂಡ ಸಂಗ್ರಹ, 96 ಪ್ರಕರಣ, ನಾಲ್ಕನೇ ದಿನ 38,800 ದಂಡ ಸಂಗ್ರಹವಾಗಿ, 69 ಪ್ರಕರಣ ಹಾಗೂ ಐದನೇ ದಿನ 59,900 ದಂಡ ಸಂಗ್ರಹವಾಗಿ 101 ಪ್ರಕರಣ ಮುಕ್ತಯವಾಗಿವೆ. ಒಟ್ಟು 448 ಪ್ರಕರಣಗಳಿಗೆ ವಾಹನ ಸವಾರರು ದಂಡ ಪಾವತಿಸಿದ್ದಾರೆ. ಬಾಕಿ ಇರುವ ಪ್ರಕರಣಗಳ ಮಾಹಿತಿ ಪಡೆದು, ದಂಡ ಪಾವತಿಗೆ ಸವಾರರು ಮುಂದಾಗಿದ್ದಾರೆ. ಹೆಚ್ಚುವರಿಯಾಗಿ ಮತ್ತೆ 5 ಸ್ವಯಂ ಪ್ರೇರಿತ ತಪಾಸಣಾ ಕೇಂದ್ರ ತೆರೆಯಲಾಗಿದೆ. ಒಟ್ಟು 15 ಸ್ವಯಂ ತಪಾಸಣಾ ಕೇಂದ್ರಗಳಿವೆ. ಇದನ್ನು ಹೊರತು ಪಡಿಸಿ, ಸಿಸಿಟಿವಿ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗುತ್ತಿದೆ. ನಗರದಲ್ಲಿ ಒಟ್ಟು 56 ಸಿಸಿಟಿವಿ ಕ್ಯಾಮರಾಗಳಿವೆ ಎಂದು ತಿಳಿಸಿದರು.

ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಮತ್ತೆ ಮನೆಗಳ್ಳತನ, ಮೊಬೈಲ್ ಕಳ್ಳತನ, ಸರಗಳ್ಳತನ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕೊರೊನಾ ಹೆಚ್ಚಾದಾಗ ಕಳ್ಳತನ, ಮೊಬೈಲ್ ಕಳ್ಳತನ, ಸರಗಳ್ಳತ ಪ್ರಕರಣ ಹೆಚ್ಚಿದ್ದವು. ಸುಲಭವಾಗಿ ಹಣ ಮಾಡುವ ಸಲುವಾಗಿ ಈ ರೀತಿಯ ಕೆಲಸ ಮಾಡುವ ಪ್ರಯತ್ನ ಮಾಡುತ್ತಾರೆ. ಈಗ ನಾವು ಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿರುವವರನ್ನು ವಿಚಾರಣೆ ಮಾಡಿದ್ದೇವೆ. ಅವರಲ್ಲಿ ಪ್ರೊಫೆಷನಲ್​ಗಿಂತ ಹೊಸಬರೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸುಲಭವಾಗಿ ಹಣ ಮಾಡಲು ಈ ಕೃತ್ಯಗಳನ್ನು ಮಾಡುತ್ತಾರೆ. ನಾವು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದೇವೆ‌ ಎಂದು ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.