ETV Bharat / state

ಖಾತೆ ಮಾಡಿಸಲು ಸತಾಯಿಸುವ ಅಧಿಕಾರಿಗಳ ಅಮಾನತು: ಡಿಸಿ ಎಚ್ಚರಿಕೆ - mysuru news

ಖಾತೆ ಮಾಡಿಸಲು ಬರುವ ಸಾರ್ವಜನಿಕರನ್ನು ಜಾಸ್ತಿ ಸತಾಯಿಸದೇ ತಕ್ಷಣವೇ ಕೆಲಸ ಮಾಡಿಕೊಡಬೇಕು ಎಂದು ಪುರಸಭೆ, ನಗರಸಭೆ ಆಯುಕ್ತರು, ತಹಸೀಲ್ದಾರ್ ಅವರಿಗೆರ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.

mysuru-dc-dr-kv-rajendra-press-meet
ಖಾತೆ, ಕಂದಾಯ ಮಾಡಲು ಸತಾಯಿಸುವ ಅಧಿಕಾರಿಗಳು ಅಮಾನತು: ಡಿಸಿ ಎಚ್ಚರಿಕೆ
author img

By

Published : Mar 13, 2023, 7:52 PM IST

ಮೈಸೂರು: ಖಾತೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಕೊಡಲು ಸತಾಯಿಸುವ ಅಧಿಕಾರಿ ವಿರುದ್ಧ ದೂರು ಬಂದರೆ ಅಂತಹವರನ್ನು ಅಮಾನತು ಮಾಡಲಾಗುವುದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು. ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಖಾತೆ, ಕಂದಾಯಗಳನ್ನು ಮಾಡಿಕೊಡಲು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು. ಈಗಾಗಲೇ ಇಂತಹ ವಿಚಾರಗಳು ಗಮನಕ್ಕೆ ಬಂದಿವೆ. ಪುರಸಭೆ, ನಗರಸಭೆ ಆಯುಕ್ತರು, ತಹಸೀಲ್ದಾರ್ ಅವರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.

400 ರೌಡಿ ಶೀಟರ್ ಹೆಸರು ಪಟ್ಟಿ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, 400 ರೌಡಿಶೀಟರ್​ಗಳನ್ನು ಗುರುತಿಸಲಾಗಿದೆ. ಇವರಲ್ಲಿ ಓರ್ವ ರೌಡಿಶೀಟರ್​ನ್ನು ಈಗಾಗಲೇ ಗಡಿಪಾರು ಮಾಡಲಾಗಿದ್ದು, ಇನ್ನೂ 3 ಮಂದಿಯನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವರ ಚಲನವಲನಗಳನ್ನು ಪರಿಶೀಲಿಸಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ. ಇನ್ನೂ ಕೆಲವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಗಟ್ಟಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರವಾಸೋದ್ಯಮದಕ್ಕೆ ಹೆಚ್ಚಿನ ಒತ್ತು: ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿರುವಂತಹ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತಂದು ಮೈಸೂರಿನಲ್ಲಿ ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗುವುದು. ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ, ರೈಲ್ವೆ, ವಿಮಾನಯಾನ ಸೇವೆ ಸುಧಾರಿಸಿದೆ. ಹೀಗಾಗಿ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ತರಲು ಅವಕಾಶವಿದೆ ಎಂದು ಹೇಳಿದರು.

ಮೈಸೂರಿನ ಎಲ್ಲ ಪ್ರವಾಸಿ ತಾಣಗಳು 5.30ರ ನಂತರ ಮುಚ್ಚಲ್ಪಡುತ್ತವೆ. ಹಾಗಾಗಿ ಸಂಜೆಯ ನಂತರ ಪ್ರವಾಸಿಗರಿಗೆ ಯಾವುದೇ ರೀತಿಯ ಮನರಂಜನೆ ಸಿಗುವುದಿಲ್ಲ. ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿರುವಂತ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತಂದು ವರ್ಷದ ಎಲ್ಲ ವಾರಾಂತ್ಯಗಳಲ್ಲಿಯೂ ಕಾರ್ಯಕ್ರಮ ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮಹಿಳೆ, ವೃದ್ಧರು, ಮಕ್ಕಳು, ಹಿಂದುಳಿದ ವಿಭಾಗಗಳಿಗೆ ರಕ್ಷಣೆ, ಟ್ರಾಫಿಕ್ ಕಂಟ್ರೋಲ್ ಹಾಗೂ ಇನ್ನಿತರ ವಿಷಯಗಳಲ್ಲಿ ಬದಲಾವಣೆ ತಂದು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲಾಗುವುದು ಎಂದರು.

ವಾರಾಂತ್ಯಗಳಲ್ಲಿ ಥೀಮ್ ಬೇಸಡ್​ ಚಟುವಟಿಕೆ: ಈ ವಿಶೇಷ ವ್ಯವಸ್ಥೆಯಿಂದ ರಾತ್ರಿ ವೇಳೆಯಲ್ಲೇ ನಮ್ಮ ವಿಶ್ವವಿಖ್ಯಾತ ಪಾರಂಪರಿಕ ತಾಣಗಳನ್ನು ಜಗತ್ತಿಗೆ ತೋರಿಸಲಾಗುವುದು. ಅದಕ್ಕಾಗಿ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಕಡೇ ಪಕ್ಷ ವಾರಾಂತ್ಯಗಳಲ್ಲಾದರೂ ರಾತ್ರಿ 10 ಗಂಟೆವರೆಗೆ ಪ್ರವಾಸಿಗರಿಗೆ ಕಾಲ ಕಳೆಯಲು ವೇದಿಕೆ ಸೃಷ್ಟಿಸಬೇಕಿದೆ. 52 ವಾರಾಂತ್ಯಗಳಲ್ಲಿ ಥೀಮ್ ಬೇಸಡ್​ ಚಟುವಟಿಕೆಗಳನ್ನು ನಡೆಸಲು ಚಿಂತಿಸಲಾಗುತ್ತಿದೆ. ಚಿತ್ರಕಲೆ, ಸಿರಿಧಾನ್ಯ, ಕೈಟ್ ಫೆಸ್ಟಿವಲ್‍ನಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಇಂತಹ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮಗಳು ವಾರಾಂತ್ಯಗಳಲ್ಲಿ ನಿರಂತರವಾಗಿ ನಡೆಯುವಂತೆ ಶಾಶ್ವತ ಯೋಜನೆ ರೂಪಿಸಲಾಗುವುದು. 32 ಇಲಾಖೆಗಳಿಗೂ ಒಂದೊಂದು ವಾರ ಕಾರ್ಯಕ್ರಮ ಆಯೋಜನೆ ಜವಾಬ್ದಾರಿ ನೀಡಲಾಗುವುದು ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೊರೊನಾ ಭೀತಿ ಇಲ್ಲ: ಜಿಲ್ಲೆಯಲ್ಲಿ ಸದ್ಯಕ್ಕೆ ಕೊರೊನಾ ಸಾಂಕ್ರಾಮಿಕ ಪಿಡುಗಿನ ಆತಂಕವಿಲ್ಲ. ಆದರೆ, ನೆಗಡಿ - ಕೆಮ್ಮು, ಶೀತದಂತಹ ಪ್ರಕರಣಗಳು ಕಂಡು ಬಂದಿದ್ದು, ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ಕೊರೊನಾ ಲಕ್ಷಣಗಳು ಕಂಡು ಬಂದವರು ಮಾಸ್ಕ್ ಧರಿಸಿ ಓಡಾಡುವುದು ಮನೆಯಲ್ಲಿ ಪ್ರತ್ಯೇಕವಾಗಿರುವ ಕೆಲವು ನಿಯಮಗಳನ್ನು ಪಾಲಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು.. ಹಳೆ ಹೆಲ್ಮೆಟ್ ಬಳಸಿ ವಿನೂತನ ಪ್ರಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.